IPL 2019: CSKಗೆ ಸುಲಭ ಟಾರ್ಗೆಟ್ ನೀಡಿದ KKR!

By Web DeskFirst Published Apr 9, 2019, 9:45 PM IST
Highlights

ಚೆನ್ನೈ ತವರಿನಲಲ್ಲಿ ಕೆಕೆಆರ್ ಅಬ್ಬರದ ಬ್ಯಾಟಿಂಗ್‌ಗೆ ಬ್ರೇಕ್ ಬಿದ್ದಿದೆ. ಕೋಲ್ಕತಾ ತಂಡದ ಬಿಗ್ ಹಿಟ್ಟರ್‌ಗಳೆಲ್ಲಾ ಸೈಲೆಂಟ್ ಆಗಿದ್ದಾರೆ. ರಸೆಲ್ ಏಕಾಂಗಿ ಹೋರಾಟದಿಂದ ಕೆಕೆಆರ್ 108 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಚೆನ್ನೈಗೆ 109 ರನ್ ಟಾರ್ಗೆಟ್ ನೀಡಲಾಗಿದೆ.

ಚೆನ್ನೈ(ಏ.09): ಚೆನ್ನೈ ಸೂಪರ್ ಕಿಂಗ್ಸ್  ನಾಯಕ ಎಂ.ಎಸ್.ಧೋನಿ ನಿರ್ಧಾರ, ಬೌಲರ್ ರೋಟೇಶನ್, ಫೀಲ್ಡಿಂಗ್ ಸೆಟಪ್ ಮುಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಮಕಾಡೆ ಮಲಗಿದೆ. ಆ್ಯಂಡ್ರೆ ರಸೆಲ್ ಹೊರತು ಪಡಿಸಿದರೆ ಉಳಿದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಲಿನ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವು ಬ್ಯಾಟ್ಸ್‌ಮನ್‌ಗಳು CSK ದಾಳಿಗೆ ತತ್ತರಿಸಿದರು. ಹೀಗಾಗಿ 108 ರನ್‌ಗೆ ಆಲೌಟ್ ಆಗಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್‌ಗೆ ಆರಂಭದಲ್ಲೇ ದೀಪಕ್ ಚಹಾರ್ ಹಾಗೂ ಹರ್ಭಜನ್ ಸಿಂಗ್ ಶಾಕ್ ನೀಡಿದರು. ಕ್ರಿಸ್ ಲಿನ್ ಶೂನ್ಯ, ಸುನಿಲ್ ನರೈನ್ 6, ನಿತೀಶ್ ರಾಣಾ ಡೌಕೌಟ್ ಆದರು. ಇನ್ನು ರಾಬಿನ್ ಉತ್ತಪ್ಪ 11, ನಾಯಕ ದಿನೇಶ್ ಕಾರ್ತಿಕ್ 19 ರನ್ ಸಿಡಿಸಿ ಔಟಾದರು. ಶುಭಮಾನ್ ಗಿಲ್ ಕೇವಲ 9 ರನ್ ಸಿಡಿಸಿ ಔಟಾದರು.

ಪವರ್ ಹಿಟ್ಟರ್ ಆ್ಯಂಡ್ರೆ ರಸೆಲ್ ಒಂದೆಡೆ ಹೋರಾಟ ಆರಂಭಿಸಿದರು. ಅಷ್ಟರಲ್ಲೇ ಧೋನಿ ಸ್ಪಿನ್ನರ್‌ಗಳಿಗೆ ಹೆಚ್ಚು ಒತ್ತು ನೀಡಿದರು. ಹೀಗಾಗಿ ರಸೆಲ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಇನ್ನು ಪಿಯೂಷ್ ಚಾವ್ಲಾ, ಕುಲ್ದೀಪ್ ಯಾದವ್ ಹಾಗೂ ಪ್ರಸಿದ್ಧ ಕೃಷ್ಣ ಬಹುಬೇಗನೆ ಪೆಲಿಯನ್ ಸೇರಿಕೊಂಡರು.

ಏಕಾಂಗಿ ಹೋರಾಟ ನೀಡಿದ ರಸೆಲ್ ಅಜೇಯ 50 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 108 ರನ್‌ ಸಿಡಿಸಿತು. ದೀಪಕ್ ಚಹಾರ್ 3, ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹೀರ್ ತಲಾ 2 ವಿಕೆಟ್ ಪಡೆದು ಮಿಂಚಿದರು. 

click me!