RCB ಸರಣಿ ಸೋಲು- ನಾಯಕತ್ವಕ್ಕೆ ಕೊಹ್ಲಿ ರಾಜಿನಾಮೆ ಮಾತು?

Published : Apr 09, 2019, 05:55 PM ISTUpdated : Apr 09, 2019, 06:00 PM IST
RCB ಸರಣಿ ಸೋಲು- ನಾಯಕತ್ವಕ್ಕೆ ಕೊಹ್ಲಿ ರಾಜಿನಾಮೆ ಮಾತು?

ಸಾರಾಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುವು ಮಾತುಗಳು ಕೇಳಿಬರುತ್ತಿದೆ. ಕ್ರಿಕೆಟ್ ದಿಗ್ಗಜರು ಸೆಲೆಬ್ರೆಟಿಗಳು ಕೊಹ್ಲಿಗೆ ನೀಡಿದ ಸೂಚನೆ ಏನು? ಇಲ್ಲಿದೆ ವಿವರ.  

ಬೆಂಗಳೂರು(ಏ.09): ಮೊದಲ ಪಂದ್ಯ ದೇವರಿಗೆ, ಎರಡನೇ ಪಂದ್ಯ ತವರಿಗೆ.., ಹೀಗೆ ಹೇಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 6 ಪಂದ್ಯಗಳು ಮುಗಿದು ಹೋಯ್ತು. 6ರಲ್ಲೂ ಸೋಲು ಕಂಡಾಯ್ತು.  ಪ್ರಯತ್ನ, ಪ್ರಯೋಗಗಳೆಲ್ಲವೂ ವ್ಯರ್ಥವಾಗಿದೆ. RCB ಸತತ ಸೋಲು ಹಾಗೂ ನಾಯಕ ವಿರಾಟ್ ಕೊಹ್ಲಿಗೆ ಆಗಿರುವ ಹಿನ್ನೆಡೆ ಇದೀಗ ಬಿಸಿಸಿಐ ಚಿಂತೆಗೂ ಕಾರಣವಾಗಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜರು ಹಾಗೂ ಸೆಲೆಬ್ರೆಟಿಗಳು ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಅನ್ನೋ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: RCB ಸತತ ಸೋಲು - ಕಂಗೆಟ್ಟ ಅಭಿಮಾನಿಯಿಂದ TV ಪುಡಿ ಪುಡಿ!

ಬಾಲಿವುಡ್ ನಟ ಕಮಲ್ ಆರ್ ಖಾನ್ ಇದೀಗ ಟ್ವೀಟ್ ಮೂಲಕ ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುವುದು ಸೂಕ್ತ ಎಂದಿದ್ದಾರೆ. 2019ರ ವಿಶ್ವಕಪ್ ದೃಷ್ಟಿಯಿಂದ ಕೊಹ್ಲಿ RCB ನಾಯಕತ್ವಕ್ಕೆ ರಾಜಿನಾಮೆ ನೀಡಬೇಕು. ಮತ್ತಷ್ಟು ಸೋಲು ಕೊಹ್ಲಿಗೆ ಒಳ್ಳೆಯದಲ್ಲ ಎಂದಿದ್ದಾರೆ. 

 

 

 

ಇದನ್ನೂ ಓದಿ: IPLಬೆಟ್ಟಿಂಗ್: ಬೆಂಗಳೂರು ಪೊಲೀಸರಿಂದ 8 ಬುಕ್ಕಿ ಅರೆಸ್ಟ್, 39.49 ರೂ ಲಕ್ಷ ವಶ!

ಇನ್ನು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ಕೊಹ್ಲಿಗೆ ವಿಶ್ರಾಂತಿ ನೀಡಬೇಕು ಎಂದಿದ್ದಾರೆ. ಭಾರತ ಉತ್ತಮ ನಿರ್ಧಾರ ತೆಗೆದುಕೊಳ್ಳುವುದಾದರೆ, 2019ರ ವಿಶ್ವಕಪ್ ಟೂರ್ನಿಗೂ ಮುನ್ನ ಕೊಹ್ಲಿಗೆ ವಿಶ್ರಾಂತಿ ನೀಡುವುದೇ ಸೂಕ್ತ ಎಂದಿದ್ದಾರೆ. 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!
ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್