ಐಪಿಎಲ್ ಆಕ್ಷನ್: ಈ ಭಾರಿ ಹರಾಜು ನಡೆಸಿಕೊಡಲ್ಲ ರಿಚರ್ಡ್!

By Web DeskFirst Published Dec 15, 2018, 9:07 PM IST
Highlights

ಐಪಿಎಲ್ ಹರಾಜು ನಡೆಸಿಕೊಡುತ್ತಿದ್ದ ರಿಚರ್ಡ್ ಮ್ಯಾಡ್ಲೇಗೆ ಬಿಸಿಸಿಐ ಕೊಕ್ ನೀಡಿದೆ. ಅಷ್ಟಕ್ಕೂ ಕಳೆದ 11 ವರ್ಷ ಐಪಿಎಲ್ ಹರಾಜು ನಡೆಸಿಕೊಟ್ಟ ರಿಚರ್ಡ್‌ಗೆ ಬಿಸಿಸಿಐ ಶಾಕ್ ನೀಡಿದ್ದೇಕೆ? ಇಲ್ಲಿದೆ ವಿವರ.

ಜೈಪುರ(ಡಿ.15): 2008ರಲ್ಲಿ ಚೊಚ್ಚಲ ಐಪಿಎಲ್ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆದಾಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ರಿಚರ್ಡ್ ಮ್ಯಾಡ್ಲೇ ಚಿರಪರಿಚಿತರಾದರು. ಆಟಗಾರರ ಹರಾಜಿನ ಕುರಿತು ಅಷ್ಟಾಗಿ ಅರಿವಿಲ್ಲದ ಭಾರತದಲ್ಲಿ ರಿಚರ್ಡ್ ಮ್ಯಾಡ್ಲೇ ನಡೆಸಿಕೊಟ್ಟ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 

ಇದನ್ನೂ ಓದಿ: ಐಪಿಎಲ್ ಹರಾಜಿಗೂ ಮುನ್ನ ಅರ್‌ಸಿಬಿಗೆ ಶಾಕ್ ನೀಡಿದ ಕೋಚ್!

ಕಳೆದ 11 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ರಿಚರ್ಡ್ ಒಂದು ಬಾರಿಯೂ ತಪ್ಪದೇ ಐಪಿಎಲ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಪ್ರತಿ ಹರಾಜಿನಲ್ಲೂ  ರಿಚರ್ಡ್ ಕೇಂದ್ರ ಬಿಂದುವಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ರಿಚರ್ಡ್ ಮಾಡ್ಲೇಗೆ ಬಿಸಿಸಿಐ ಕೊಕ್ ನೀಡಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: 6 ಭಾರತೀಯ ಆಟಗಾರರನ್ನ ಖರೀದಿಸಲು ಮುಂಬೈ ಪ್ಲಾನ್!

ರಿಚರ್ಡ್ ಮ್ಯಾಡ್ಲೇ ಬದಲು ಬ್ರಿಟೀಷ್ ಹರಾಜುಗಾರ ಹ್ಯೂಸ್ ಎಡ್‌ಮೆಡ್ಸ್ ಈ ಬಾರಿ ಐಪಿಎಲ್ ಹರಾಜು ನಡೆಸಿಕೊಡಲಿದ್ದಾರೆ. ಬಿಸಿಸಿಐ ನಿರ್ಧಾರದಿಂದ ರಿಚರ್ಡ್ ಶಾಕ್ ಆಗಿದ್ದಾರೆ. ನಾನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆ ತರಲು ಸೂಚಿಸಿದ್ದೆ, ಆದರೆ ನನ್ನನ್ನೇ ಬದಲಾಯಿಸಿರುವುದು ಅಚ್ಚರಿ ತಂದಿದೆ ಎಂದಿದ್ದಾರೆ.

ಇದನ್ನೂ ಓದಿ:ಕಮ್‌ಬ್ಯಾಕ್ ಪಂದ್ಯದಲ್ಲಿ 5 ವಿಕೆಟ್- ಕೊಹ್ಲಿ ಸೈನ್ಯ ಸೇರಿಕೊಳ್ತಾರಾ ಹಾರ್ದಿಕ್?

ಬಿಸಿಸಿಐ ಈ ಬಾರಿಯ ಹರಾಜನ್ನ ಜೈಪುರದಲ್ಲಿ ಆಯೋಜಿಸಿದೆ. ಈ ಮೂಲಕ ಇಷ್ಟು ವರ್ಷ ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದ ಸಂಪ್ರದಾಯವನ್ನೂ ಮುರಿದಿದೆ. ಕೆಲ ಬದಲಾವಣೆಗಳೊಂದಿಗೆ ಈ ಬಾರಿಯ ಐಪಿಎಲ್ ಹರಾಜು ಭಾರಿ ಕುತೂಹಲ ಕೆರಳಿಸಿದೆ.
 

click me!