ಐಪಿಎಲ್ ಹರಾಜು ಪ್ರಕ್ರಿಯೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಈ ಬಾರಿ ಪ್ರಶಸ್ತಿ ಗೆಲುವಿಗೆ ಭಾರಿ ಕಸರತ್ತು ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ಅಷ್ಟಕ್ಕೂ ಆರ್‌ಸಿಬಿ ಎದುರಾದ ಆಘಾತವೇನು? ಇಲ್ಲಿದೆ ವಿವರ.
ಬೆಂಗಳೂರು(ಡಿ.15): ಐಪಿಎಲ್ ಹರಾಜು ಹಾಗೂ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ತಂಡಕ್ಕೆ ಆಘಾತ ಎದುರಾಗಿದೆ. 2019ರ ಐಪಿಎಲ್ ಟೂರ್ನಿಗೆ ಆರ್‌ಸಿಬಿ ತಂಡದ ಕೋಚ್ ಆಗಿ ಯಶಸ್ವಿ ಕೋಚ್ ಗ್ಯಾರಿ ಕರ್ಸ್ಟನ್ ಅವರನ್ನ ಆಯ್ಕೆ ಮಾಡಲಾಗಿದೆ. ಆದರೆ ಗ್ಯಾರಿ ನಡೆ ಇದೀಗ ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ: ಆರ್‌ಸಿಬಿಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರು ಟ್ವೀಟ್ ಮೂಲಕ ಹೇಳಿದ್ದೇನು?
undefined
ಐಪಿಎಲ್ ಹರಾಜು ಪ್ರಕ್ರಿಯೆಗೆ ಇನ್ನುಇನ್ನೆರಡು ದಿನ ಬಾಕಿ ಇರುವಾಗಲೇ ಗ್ಯಾರಿ ಕರ್ಸ್ಟನ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಆರ್ಜಿ ಸಲ್ಲಿಸಿದ್ದಾರೆ. 2011ರ ಟೀಂ ಇಂಡಿಯಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕೋಚ್ ಗ್ಯಾರಿ ಇದೀಗ ಮಹಿಳಾ ತಂಡಕ್ಕೆ ಕೋಚ್ ಆಗಿ ಆಯ್ಕೆಯಾಗೋ ಸಾಧ್ಯತೆ ಇದೆ. ಹೀಗಾದಲ್ಲಿ ಗ್ಯಾರಿ ಕರ್ಸ್ಟನ್ ಆರ್‌ಸಿಬಿ ತಂಡದ ಕೋಚ್ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: ಐಪಿಎಲ್ ಹರಾಜು: 6 ಭಾರತೀಯ ಆಟಗಾರರನ್ನ ಖರೀದಿಸಲು ಮುಂಬೈ ಪ್ಲಾನ್!
ಲೋಧ ಶಿಫಾರಸು ಪ್ರಕಾರ ಸ್ವಹಿತಾಸಕ್ತಿ ಸಂಘರ್ಷ ನೀತಿಯಿಂದ ಭಾರತೀಯ ಕ್ರಿಕೆಟ್‌ನಲ್ಲಿ ಎರಡು ಹುದ್ದೆ ನಿರ್ವಹಿಸುವಂತಿಲ್ಲ. ಭಾರತೀಯ ಮಹಿಳಾ ತಂಡದ ಕೋಚ್ ಆದರೆ, ಐಪಿಎಲ್ ಟೂರ್ನಿಯಲ್ಲಿ ಕೋಚ್ ಹುದ್ದೆ ನಿರ್ವಹಿಸುವಂತಿಲ್ಲ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತವಾಗಿದೆ.