ಐಪಿಎಲ್ ಹರಾಜು: 6 ಭಾರತೀಯ ಆಟಗಾರರನ್ನ ಖರೀದಿಸಲು ಮುಂಬೈ ಪ್ಲಾನ್!

Published : Dec 15, 2018, 06:40 PM ISTUpdated : Dec 15, 2018, 06:46 PM IST
ಐಪಿಎಲ್ ಹರಾಜು: 6 ಭಾರತೀಯ ಆಟಗಾರರನ್ನ ಖರೀದಿಸಲು ಮುಂಬೈ ಪ್ಲಾನ್!

ಸಾರಾಂಶ

ಐಪಿಎಲ್ ಹರಾಜಿಗೆ ಸಂಪೂರ್ಣ ತಯಾರಿ ಮಾಡಿಕೊಂಡಿರುವ ಮುಂಬೈ ಇಂಡಿಯನ್ಸ್ 6 ಭಾರತೀಯ ಆಟಗಾರರನ್ನ ಖರೀದಿಸಲು ಮುಂದಾಗಿದೆ. ಹಾಗಾದರೆ ಮುಂಬೈ ಕಣ್ಣಿಟ್ಟಿರುವ ಆ 6 ಭಾರತೀಯ ಆಟಗಾರರು ಯಾರು? ಇಲ್ಲಿದೆ ವಿವರ.

ಜೈಪುರ(ಡಿ.15): ಐಪಿಎಲ್ ಹರಾಜಿಗೆ 8 ಫ್ರಾಂಚೈಸಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜೈಪುರದಲ್ಲಿ ಡಿಸೆಂಬರ್ 18 ರಂದು ನಡೆಯಲಿರುವ ಹರಾಜಿನಲ್ಲಿ ಎಚ್ಚರಿಕೆಯಿಂದ ಬಿಡ್ ಮಾಡಲು ಫ್ರಾಂಚೈಸಿಗಳು ಮುಂದಾಗಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಭಾರತೀಯ ಯುವ ಪ್ರತಿಭೆಗಳಿಗೆ ಮಣೆ ಹಾಕಲು ನಿರ್ಧರಿಸಿದೆ.

ಇದನ್ನೂ ಓದಿ: ಕಮ್‌ಬ್ಯಾಕ್ ಪಂದ್ಯದಲ್ಲಿ 5 ವಿಕೆಟ್- ಕೊಹ್ಲಿ ಸೈನ್ಯ ಸೇರಿಕೊಳ್ತಾರಾ ಹಾರ್ದಿಕ್?

2018ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲಾಗಿತ್ತು. ಆಟಗಾರರ ಇಂಜುರಿ, ಸ್ಥಿರ ಪ್ರದರ್ಶನದ ಕೊರತೆ ಸೇರಿದಂತೆ ಹಲವು ಸಮಸ್ಯೆ ಎದುರಿಸಿದ ಮುಂಬೈ ಇಂಡಿಯನ್ಸ್, ಈ ಆವೃತ್ತಿಯಲ್ಲಿ ಎಚ್ಚೆತ್ತುಕೊಂಡಿದೆ. ಈ ಮೂಲಕ ಮತ್ತೊಮ್ಮೆ ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: ಆಟಗಾರರ ಖರೀದಿಗೆ ತಂಡದಲ್ಲಿರುವ ಬಾಕಿ ಹಣವೆಷ್ಟು?

ಈ ಬಾರಿಯ ಹರಾಜಿನಲ್ಲಿ 6 ಭಾರತೀಯ ಯುವ ಪ್ರತಿಭೆಗಳ ಮೇಲೆ ಮುಂಬೈ ಕಣ್ಣಿಟ್ಟಿದೆ. ಈ ಮೂಲಕ ಮುಂಬೈ ತಂಡದ ಬೆಂಚ್ ಸ್ಟ್ರೆಂಥ್ ಹೆಚ್ಚಿಸಲು ಮುಂದಾಗಿದೆ.   ಈ ಬಾರಿಯ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 7 ಆಟಗಾರರನ್ನ ಖರೀದಿಸಬಹುದು. ಒರ್ವ ವಿದೇಶಿ ಹಾಗೂ 6 ಭಾರತೀಯ ಆಟಗಾರರನ್ನ ಖರೀದಿಸಲು ಅವಕಾಶವಿದೆ. ಈ ಕೆಳಗಿನ ಆಟಗಾರರ ಮೇಲೆ ಮುಂಬೈ ಕಣ್ಣಿಟ್ಟಿದೆ.

ಇದನ್ನೂ ಓದಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೈ ಹಿಡಿದ ಪರುಪಳ್ಳಿ ಕಶ್ಯಪ್!

ಸಿವಿ ಮಿಲಿಂದ್    
ಶಿವ ದುಬೆ
ಸರ್ಫರಾಜ್ ಖಾನ್
ಜಲಜ್ ಸಕ್ಸೇನಾ
ತಜೇಂದರ್ ದಿಲ್ಹೋನ್
ರಸಿಖ್ ದಾರ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

29 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ವಿಶ್ವಕಪ್‌ ಗೆದ್ದ ಭಾರತ!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!