ಸನ್‌ರೈಸರ್ಸ್ ಹೈದರಾಬಾದ್ ಸೇರಿಕೊಂಡ ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾವುಕರಾಗಿದ್ದಾರೆ. ತಂಡ ಸೇರಿದ ಬೆನ್ನಲ್ಲೇ ವಾರ್ನರ್ ಟ್ವೀಟ್ ಮೂಲಕ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಇಲ್ಲಿದೆ ವಾರ್ನರ್ ಟ್ವೀಟ್.
ಹೈದರಾಬಾದ್(ಮಾ.17): ಬಾಲ್ ಟ್ಯಾಂಪರಿಂಗ್ ಮೂಲಕ ನಿಷೇಧದ ಶಿಕ್ಷೆ ಅನುಭವಿಸಿದ ಆಸ್ಟ್ರೇಲಿಯಾ ಉಪನಾಯಕ ಡೇವಿಡ್ ವಾರ್ನರ್ ಇದೀಗ ಐಪಿಎಲ್ ಟೂರ್ನಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ಆವೃತ್ತಿಯಿಂದ ಹೊರಗುಳಿದಿದ್ದ ವಾರ್ನರ್, ಇದೀಗ ಸನ್‌ರೈಸರ್ಸ್ ಹೈದರಾಬಾದ್ ಸೇರಿಕೊಂಡಿದ್ದಾರೆ. ತಂಡ ಕೂಡಿಕೊಂಡ ಬೆನ್ನಲ್ಲೇ ವಾರ್ನರ್ ಭಾವುಕರಾಗಿದ್ದಾರೆ.
ಇದನ್ನೂ ಓದಿ: ಐಪಿಎಲ್ 2019: KKR ತಂಡ ಸೇರಿಕೊಂಡ ಮತ್ತೊಬ್ಬ ಕನ್ನಡಿಗ!
undefined
ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿಕೊಂಡಿರುವುದು ಅತೀವ ಸಂತಸ ತಂದಿದೆ. ಕಳೆದ 12 ತಿಂಗಳಲ್ಲಿ ನನ್ನನ್ನು ಬೆಂಬಲಿಸಿದ, ಪ್ರೋತ್ಸಾಹಿಸಿದ ಫ್ರಾಂಚೈಸಿ ಹಾಗೂ ಅಭಿಮಾನಿಗಳಿಗೆ ನಾನೆಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ವಾರ್ನರ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ನಿಷೇಧದ ಶಿಕ್ಷೆಯಲ್ಲಿನ ಕಠಿಣ ದಿನಗಳನ್ನ ನೆನೆದು ಭಾವುಕರಾಗಿದ್ದಾರೆ.
Great to be back here in Hyderabad with I can’t thank the franchise and fans enough for your loyal support over the last 12months. Time to get back into it. … https://t.co/8x7dGhaMNU
— David Warner (@davidwarner31)
ಇದನ್ನೂ ಓದಿ: ಐಪಿಎಲ್ ತಂಡ ಸೇರಿಕೊಂಡ ಸ್ಮಿತ್, ವಾರ್ನರ್- SRH,RR ಮತ್ತಷ್ಟು ಬಲಿಷ್ಠ!
ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, 2016ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿದ್ದಾರೆ. ನಿಷೇಧದಿಂದಾಗಿ 11ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾಯಿತು.