ಡುಪ್ಲೆಸಿಸ್-ರೈನಾ ಅಬ್ಬರ- ಪಂಜಾಬ್‌ಗೆ 171 ರನ್ ಟಾರ್ಗೆಟ್!

By Web DeskFirst Published May 5, 2019, 5:41 PM IST
Highlights

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಅಂತಿಮ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೃಹತ್ ಮೊತ್ತ ಕಲೆಹಾಕಿ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿಯೋ ವಿಶ್ವಾಸದಲ್ಲಿದೆ. ಪಂಜಾಬ್ ಬೌಲಿಂಗ್ ಹಾಗೂ CSK ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

ಮೊಹಾಲಿ(ಮೇ.05): ಫಾಫ್ ಡುಪ್ಲೆಸಿಸ್ ಹಾಗೂ ಸುರೇಶ್ ರೈನಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಬ್ಬರಿಸಿದೆ.  ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದದಲ್ಲಿ CSK 5 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿತು. ಈ ಮೂಲಕ ಪಂಜಾಬ್‌ಗೆ 171 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ CSK ಆರಂಭದಲ್ಲೇ ಶೇನ್ ವ್ಯಾಟ್ಸನ್‌ ವಿಕೆಟ್ ಕಳೆದುಕೊಂಡಿತು. ಮೊದಲ ವಿಕೆಟ್ ಕಬಳಿಸಿ ಸಂಭ್ರಮಿಸಿದ ಪಂಜಾಬ್ ತಂಡಕ್ಕೆ ಮತ್ತೆ ಆಘಾತ ಕಾದಿತ್ತು. ಫಾಫ್ ಡುಪ್ಲೆಸಿಸ್ ಹಾಗೂ ಸುರೇಶ್ ರೈನಾ ಜೊತೆಯಾಟಕ್ಕೆ ಪಂಜಾಬ್ ಸುಸ್ತಾಯಿತು. ಪ್ಲೇ ಅಫ್‌ಗೆ ಇದ್ದ ಕೊನೆಯ ಅವಕಾಶವೊಂದು ಅಷ್ಟಲ್ಲೇ ಮರೆಯಾಯಿತು.

ಡುಪ್ಲೆಸಿಸ್ ಹಾಗೂ ರೈನಾ ಆಕರ್ಷಕ ಅರ್ಧಶತಕ  ಸಿಡಿಸಿದರು. ರೈನಾ 38 ಎಸೆತದಲ್ಲಿ 53 ರನ್ ಸಿಡಿಸಿ ಔಟಾದರು. ಆದರೆ ಡುಪ್ಲೆಸಿಸ್ ಹೋರಾಟ ಮುಂದುವರಿಸಿದರು. ಅದ್ಬುತ ಪ್ರದರ್ಶನ ನೀಡಿದ ಡುಪ್ಲೆಸಿಸ್ 55 ಎಸೆತದಲ್ಲಿ 10 ಬೌಂಡರಿ 4 ಸಿಕ್ಸರ್ ಮೂಲಕ 96 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 4 ರನ್‌ಗಳಿಂದ ಶತಕ ವಂಚಿತರಾದರು. ಅಂಬಾಟಿ ರಾಯುಡು ಕೇವಲ 1 ರನ್ ಸಿಡಿಸಿ ಔಟಾದರು. ಕೇದಾರ್ ಜಾಧವ್ ಶೂನ್ಯ ಸುತ್ತಿದರು.  ನಾಯಕ ಎಂ.ಎಸ್.ಧೋನಿ ಅಜಯ 8 ರನ್ ಸಿಡಿಸಿದರು.ಈ ಮೂಲಕ CSK 5 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿತು. 
 

click me!