
ಚೆನ್ನೈ(ಮಾ.23): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡೋ ವಿಶ್ವಾಸದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತೀವ್ರ ನಿರಾಸೆಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ RCB ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ 2019ರ ಐಪಿಎಲ್ ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿದೆ.
ಇದನ್ನೂ ಓದಿ: IPL 2019:ಮೈದಾನದಲ್ಲಿ ಕ್ರಿಕೆಟ್ ತಲೈವಾ- ಗ್ಯಾಲರಿಯಲ್ಲಿ ತಮಿಳು ತಲೈವಾ!
ಮೊದಲು ಬ್ಯಾಟಿಂಗ್ ಮಾಡಿದ RCB,ಆತಿಥೇಯ CSK ಸ್ಪಿನ್ ಮೋಡಿಗೆ ತ್ತರಿಸಿತು. ವಿರಾಟ್ ಕೊಹ್ಲಿ 6 , ಮೊಯಿನ್ ಆಲಿ 9, ಎಬಿ ಡಿವಿಲಿಯರ್ಸ್ 9, ಶಿಮ್ರೊನ್ ಹೆಟ್ಮೆಯರ್ ಶೂನ್ಯ, ಶಿವಂ ದುಬೆ 2, ಕೊಲಿನ್ ಡಿ ಗ್ರ್ಯಾಂಡ್‌ಹೊಮ್ಮೆ 4 ಸಿಡಿಸಿ ಔಟಾದರೆ ಪಾರ್ಥೀವ್ ಪಟೇಲ್ 29 ರನ್ ಕಾಣಿಕೆ ನೀಡಿದರು.
17.1 ಓವರ್‌ಗಳಲ್ಲಿ RCB 70 ರನ್‌ಗೆ ಆಲೌಟ್ ಆಯಿತು. ಈ ಮೂಲಕ RCB 2ನೇ ಕಡಿಮೆ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಯಿತು. ಇದಕ್ಕೂ ಮೊದಲು 2017ರಲ್ಲಿ RCB, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳಿಗೆ ಆಲೌಟ್ ಆಗಿತ್ತು.
ಇದನ್ನೂ ಓದಿ: ಭಾರತೀಯ ಸೇನೆಗೆ IPL ಉದ್ಘಾಟನಾ ಸಮಾರಂಭದ 20 ಕೋಟಿ !
ಗೆಲುವಿಗೆ 71 ರನ್ ಟಾರ್ಗೆಟ್ ಪಡೆದ CSK ಆರಂಭದಲ್ಲೇ ಶೇನ್ ವ್ಯಾಟ್ಸನ್ ವಿಕೆಟ್ ಕಳೆದುಕೊಂಡಿತು. ಆದರೆ ತಂಡದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸುರೇಶ್ ರೈನಾ ಹಾಗೂ ಅಂಬಾಟಿ ರಾಯುಡು ಚೇತರಿಕೆ ನೀಡಿದರು. ಈ ವೇಳೆ ರೈನಾ ಐಪಿಎಲ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.
ರೈನಾ 19 ರನ್‌ಗೆ ಔಟಾದರು. ಕೇದಾರ್ ಜಾಧವ್ ಜೊತೆ ಇನ್ನಿಂಗ್ಸ್ ಕಟ್ಟಿದ ರಾಯುಡು 28 ರನ್ ಸಿಡಿಸಿ ಔಟಾದರು. RCB ಕರಾರುವಕ್ ಬೌಲಿಂಗ್‌ನಿಂದ ಸುಲಭ ಗುರಿ ಬೆನ್ನಟ್ಟಲು CSK ತಂಡ 17.3 ಓವರ್ ತೆಗೆದುಕೊಂಡಿತು. ಕೇದಾರ್ ಹಾಗೂ ರವೀಂದ್ರ ಜಡೇಜಾ CSKಗೆ 7 ವಿಕೆಟ್ ಗೆಲುವು ತಂದುಕೊಟ್ಟರು. ಜಾಧವ್ ಅಜೇಯ 13 ರನ್ ರನ್ ಬಾರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.