
ಚೆನ್ನೈ(ಮೇ.01): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಮೊದಲ ಸ್ಥಾನಕ್ಕೇರಿದೆ. ಇಮ್ರಾನ್ ತಾಹೀರ್ ಹಾಗೂ ರವೀಂದ್ರ ಜಡೇಜಾ ಅದ್ಬುತ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತತ್ತರಿಸಿದೆ. ಡೆಲ್ಲಿ ತಂಡ ಕೇವಲ 16.2 ಓವರ್‌ಗಳಲ್ಲಿ 99 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಚೆನ್ನೈ 80 ರನ್ ಭರ್ಜರಿ ಗೆಲುವು ಸಾಧಿಸಿತು.
ಗೆಲುವಿಗೆ 180 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಪೃಥ್ವಿ ಶಾ 4 ರನ್ ಸಿಡಿಸಿ ಔಟಾದರು. ಶಿಖರ್ ಧವನ್ 19 ರನ್ ಸಿಡಿಸಿ ನಿರ್ಗಮಿಸಿದರು. ನಾಯಕ ಶ್ರೇಯಸ್ ಅಯ್ಯರ್ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್ ಕೂಡ ಹೋರಾಟ ನೀಡಲಿಲ್ಲ.
ರಿಷಪ್ ಪಂತ್, ಕೊಲಿನ್ ಇನ್‌ಗ್ರಾಂ, ಅಕ್ಸರ್ ಪಟೇಲ್, ಶೆರ್ಫಾನೆ ರುದ್‌ಫೋರ್ಡ್ ಅಬ್ಬರಿಸಿಲ್ಲ. ಕ್ರಿಸ್ ಮೋರಿಸ್ ಕ್ರಿಸ್‌ನಲ್ಲಿ ನಿಲ್ಲೋ ಮೊದಲೇ ಧೋನಿ ಸ್ಟಂಪ್ ಔಟ್ ಮಾಡಿದರು. ಏಕಾಂಗಿ ಹೋರಾಟ ನೀಡಿದ ಶ್ರೇಯಸ್ ಅಯ್ಯರ್ 44 ರನ್ ಕಾಣಿಕೆ ನೀಡಿ ಔಟಾದರು.
ಜೆ ಸುಚಿತ್ 6 ರನ್ ಸಿಡಿಸಿ ಔಟಾದರು. ಅಮಿತ್ ಮಿಶ್ರಾ ವಿಕೆಟ್ ಪತನದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 16.2 ಓವರ್‌ಗಳಲ್ಲಿ 99 ಆಲೌಟ್ ಆಯಿತು. ಈ ಮೂಲಕ CSK 80 ರನ್ ಗೆಲುವು ಸಾಧಿಸಿತು. ಇಮ್ರಾನ್ ತಾಹೀರ್ 4 ಹಾಗೂ ರವೀಂದ್ರ ಜಡೇಡಾ 3 ವಿಕೆಟ್ ಕಬಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.