IPL 2019: ಕೋಲ್ಕತಾದಲ್ಲಿ 'ರಸಲ್' ಮೇನಿಯಾ- SRH ಬಗ್ಗು ಬಡಿದ KKR!

By Web DeskFirst Published Mar 24, 2019, 7:59 PM IST
Highlights

ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ನಡುವಿನ ಪಂದ್ಯ ಅಭಿಮಾನಿಗಳಿಗೆ ಸೂಪರ್ ಸಂಡೆ ಫೀಲ್ ನೀಡಿತು. ಆಂಡ್ಯೆ ರಸೆಲ್ ಅಬ್ಬರಕ್ಕೆ ನಲುಗಿದ SRH ಬೃಹತ್ ಮೊತ್ತ ಪುಡಿ ಪುಡಿಯಾಯಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಕೋಲ್ಕತಾ(ಮಾ.24):  ಆ್ಯಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ಹಾಗೂ ಶುಭ್‌ಮಾನ್ ಗಿಲ್ ಅದ್ಬುತ ಫಿನೀಶಿಂಗ್‌ನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ಸನ್ ರೈಸರ್ಸ್ ವಿರುದ್ದ 6 ವಿಕೆಟ್ ರೋಚಕ ಗೆಲವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದರೆ, ಬೃಹತ್ ಮೊತ್ತ  ಸಿಡಿಸಿ ಸೋಲಿಗೆ ಶರಣಾಯಿತು.

182 ರನ್ ಟಾರ್ಗೆಟ್ ಪಡೆದ KKR ನಿರೀಕ್ಷಿತ ಆರಂಭ ಪಡೆಯಲಿಲ್ಲ. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ನಿತೀಶ್ ರಾಣಾ ಹಾಗೂ ರಾಬಿನ್ ಉತ್ತಪ್ಪ 80 ರನ್ ಜೊತೆಯಾಟ ನೀಡಿದರು. ಈ ಮೂಲಕ KKR ಚೇತರಿಸಿಕೊಂಡಿತು. ಉತ್ತಪ್ಪ 35 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: ಫ್ಲಡ್‌ಲೈಟ್ ಕೈ ಕೊಟ್ಟರೂ- ಗೆಲುವಿನ ದಡ ಸೇರಿದ KKR

ನಾಯಕ ದಿನೇಶ್ ಕಾರ್ತಿಕ್ ನಿರಾಸೆ ಮೂಡಿಸಿದರು. ಹೀಗಾಗಿ KKR ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಆದರೆ ನಿತೀಶ್ ರಾಣಾ ಹಾಗೂ ಆ್ಯಂಡ್ರೆ ರಸೆಲ್ ಜೊತೆಯಾಟದಿಂದ ಮತ್ತೆ ಗೆಲುವಿನ ಆಸೆ ಚಿಗುರೊಡೆಯಿತು. ಇದೇ ವೇಳೆ ಕ್ರೀಡಾಂಗಣದ ಫ್ಲಡ್‌ಲೈಟ್ ಕೈ ಕೊಟ್ಟ ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತು.

ಪಂದ್ಯ ಆರಂಭಗೊಂಡ ತಕ್ಷಣವೇ 68 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದ ನಿತೀಶ್ ರಾಣಾ ವಿಕೆಟ್ ಪತನಗೊಂಡಿತು. ಅಷ್ಟರಲ್ಲೆ ಪಂದ್ಯ ರೋಚಕ ಘಟ್ಟ ತಲುಪಿತು. ರಸೆಲ್ ಬೌಂಡರಿ , ಸಿಕ್ಸರ್ ಮೂಲಕ ಅಬ್ಬರ ಆರಂಭಿಸಿದರು. ಅಂತಿಮ 12 ಎಸೆತದಲ್ಲಿ ಕೆಕೆಆರ್ ಗೆಲುವಿಗೆ 34 ರನ್ ಅವಶ್ಯಕತೆ ಇತ್ತು. 

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

19ನೇ ಓವರ್‌ನಲ್ಲಿ ರಸೆಲ್ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಹೀಗಾಗಿ ಅಂತಿಮ 6 ಎಸೆತದಲ್ಲಿ ಕೆಕೆಆರ್ ಗೆಲುವಿಗೆ  13 ರನ್ ಬೇಕಿತ್ತು.  ಯುವ ಬ್ಯಾಟ್ಸ್‌ಮನ್ ಶುಭ್‌ಮಾನ್ ಗಿಲ್ ಭರ್ಜರಿ 2 ಸಿಕ್ಸರ್ ಸಿಡಿಸಿ ಇನ್ನೂ 2 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ರಸೆಲ್ ಅಜೇಯ 49 ರನ್ ಚಚ್ಚಿದರೆ, ಗಿಲ್ ಅಜೇಯ 18 ರನ್ ಬಾರಿಸಿದರು. 

ಮೊದಲು ಬ್ಯಾಟಿಂಗ್ ಮಾಡಿದ  SRH 2 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿತು. ಡೇವಿಡ್ ವಾರ್ನರ್ 85, ಜಾನಿ ಬೈರ್ಸ್ಟೋ 39 ಹಾಗೂ ವಿಜಯ ಶಂಕರ್ ಅಜೇಯ 40 ರನ್ ಸಿಡಿಸಿದರು. ಆದರೆ ಯೂಸುಫ್ ಪಠಾಣ್ ನಿರಾಸೆ ಮೂಡಿಸಿದರು.  ಅಂತಿಮ ಹಂತದಲ್ಲಿ ಮನೀಶ್ ಪಾಂಡೆ ಅಜೇಯ 8 ರನ್ ಸಿಡಿಸಿದರು. ಈ ಮೂಲಕ SRH ಬೃಹತ್ ಮೊತ್ತ ಕಲೆ ಹಾಕಿತು. 

click me!