ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ ಆತಿಥೇಯರು ಸಂಕಷ್ಟಕ್ಕೆ ಸಿಲುಕಿದ್ದರು. ಒಂದೆಡೆ ಕ್ರೀಡಾಂಗಣ ಫ್ಲಡ್‌ಲೈಟ್ ಕೈಕೊಟ್ಟರೆ, ಪಂದ್ಯ ಆರಂಭಗೊಂಡ ತಕ್ಷಣವೇ ವಿಕೆಟ್ ಕಳೆದುಕೊಂಡಿತು.
ಕೋಲ್ಕತಾ(ಮಾ.24): ಐಪಿಎಲ್ 12ನೇ ಆವೃತ್ತಿಯ 2ನೇ ದಿನ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ರೋಚಕ ಘಟ್ಟ ತಲುಪಿದೆ. ಗೆಲುವಿಗೆ 182 ರನ್ ಟಾರ್ಗೆಟ್ ಪಡೆದಿರುವ KKR, 15.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕ 118 ರನ್ ಕಲೆಹಾಕಿತ್ತು. ಗೆಲುವಿಗೆ ಇನ್ನು 28 ಎಸೆತದಲ್ಲಿ 64 ರನ್ ಅವಶ್ಯಕತೆ ಇದೆ ಅನ್ನೋವಾಗ ಕ್ರೀಡಾಂಗಣ ಲೈಟ್ ಕೈಕೊಟ್ಟಿತ್ತು.
ಪಂದ್ಯ ರೋಚ ಘಟ್ಟ ತಲುಪುತ್ತಿದ್ದಂತೆ ಕೋಲ್ಕತಾ ಈಡನ್ ಗಾರ್ಡನ್ಸ್ ಮೈದಾನದ ಫ್ಲಡ್‌ಲೈಟ್ ಕೆಟ್ಟು ಹೋಗಿದೆ. ಹೀಗಾಗಿ ಪಂದ್ಯವನ್ನು ತಾತ್ಕಲಿಕ ಸ್ಥಗಿತಗೊಳಿಸಲಾಯಿತು. ಇದು ಆತಿಥೇಯ KKR ಆತಂಕಕ್ಕೆ ಕಾರಣವಾಗಿತ್ತು. ಕಾರಣ ಈ ಸಂದರ್ಭದಲ್ಲಿ ಡಕ್‌ವರ್ತ್ ನಿಯಮ ಅನ್ವಯಿಸಿದರೆ ಸನ್ ರೈಸರ್ಸ್ 7 ರನ್‌ಗಳ ಮುನ್ನಡೆಯಲ್ಲಿತ್ತು.
ಲೈಟ್ ಸರಿಪಡಿಸಿ ತಕ್ಷಣವೇ ಪಂದ್ಯ ಆರಂಭಗೊಂಡಿತು. ಆದರೆ ಪಂದ್ಯ ಆರಂಭಗೊಂಡ ತಕ್ಷಣವೇ 68 ರನ್ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ನಿತೀಶ್ ರಾಣ 68 ರನ್ ಸಿಡಿಸಿ ಔಟಾದರು. ಚೇಸಿಂಗ್ ವೇಳೆ KKR ತಂಡಕ್ಕೆ ಹಲವು ಅಡೆ ತಡೆ ಎದುರಾಗಿದೆ.