ಕೊಹ್ಲಿ, ABD ಹೊರತು ಪಡಿಸಿದ್ರೆ RCBಯಲ್ಲಿದ್ದಾರೆ ಮೂವರು ಗೇಮ್ ಚೇಂಜರ್ಸ್!

By Web Desk  |  First Published Mar 20, 2019, 12:37 PM IST

12ನೇ ಐಪಿಎಲ್ ಟೂರ್ನಿಯಲ್ಲಿ  RCB ತಂಡ ಮತ್ತಷ್ಟು ಬಲಿಷ್ಟವಾಗಿದೆ. ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹೊರತು ಪಡಿಸಿದರೆ ತಂಡದಲ್ಲಿ ಮೂವರು ಯುವ ಕ್ರಿಕೆಟಿಗರು ಗೇಮ್ ಚೇಂಜರ್‌ಗಳಾಗಿ ಗುರುತಿಸಿಕೊಂಡಿದ್ದಾರೆ. ಮೂವರು ಯುವ ಕ್ರಿಕೆಟಿಗರ ವಿವರ ಇಲ್ಲಿದೆ.
 


ಬೆಂಗಳೂರು(ಮಾ.20): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12ನೇ ಆವೃತ್ತಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಸುತ್ತಿದೆ. ಈ ಬಾರಿಯ ಹರಾಜಿನಲ್ಲಿ ಯುವ ಆಟಗಾರರಿಗೆ ಮಣೆ ಹಾಕಿದ RCB ಬಲಿಷ್ಠ ತಂಡವನ್ನು ಸಜ್ಜುಗೊಳಿಸಿದೆ. ನಾಯಕ ವಿರಾಟ್  ಕೊಹ್ಲಿ, ಎಬಿ ಡಿವಿಲಿಯರ್ಸ್ ಹೊರತು ಪಡಿಸಿದರೆ, ತಂಡದಲ್ಲಿರುವ ಮೂವರು ಯುವ ಕ್ರಿಕೆಟಿಗರು ಗೇಮ್ ಚೇಂಜ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ.

1 ಶಿಮ್ರೊನ್ ಹೆಟ್ಮೆಯರ್
ವೆಸ್ಟ್ ಇಂಡೀಸ್ ಯುವ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆಯರ್, ಆಡಿರೋದು 24 ಏಕದಿನ ಪಂದ್ಯ. ಅಷ್ಟರಲ್ಲೇ 4 ಶತಕ ಸಿಡಿಸಿದ್ದಾರೆ. 2016ರ ವಿಂಡೀಸ್ ಅಂಡರ್-19 ತಂಡದಲ್ಲಿದ್ದ ಶಿಮ್ರೊನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಚಾಂಪಿಯನ್ ಪಟ್ಟ ಗೆಲ್ಲಿಸಿಕೊಟ್ಟಿದ್ದರು. 22 ವರ್ಷದ ಈ ಯುವ ಬ್ಯಾಟ್ಸ್‌ಮನ್ ಏಕಾಂಗಿಯಾ ಪಂದ್ಯದ ಗತಿಯನ್ನು ಬದಲಿಸಬಲ್ಲರು.

Latest Videos

undefined

2 ನವದೀಪ್ ಸೈನಿ
ದೆಹಲಿಯ ವೇಗಿ ನವದೀಪ್ ಸೈನಿ ಸ್ಥಿರ ಪ್ರದರ್ಶನ ನೀಡುತ್ತಿರುವ ಕ್ರಿಕೆಟಿಗ. 2017-18ರಲ್ಲಿ ದೆಹಲಿ ರಣಜಿ ತಂಡ ಫೈನಲ್ ಪ್ರವೇಶಿಸಲು ಮುಖ್ಯ ಕಾರಣ ನವದೀಪ್ ಸೈನಿ ಮಾರಕ ದಾಳಿ. ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ಮೊಹಮ್ಮದ್ ಶಮಿ ಬದಲು ಟೀಂ ಇಂಡಿಯಾ ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದರು. 26 ವರ್ಷದ ಈ ವೇಗಿ RCB ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಶಕ್ತಿ ನೀಡಿದ್ದಾರೆ.

3 ಶಿವಂ ದುಬೆ
ಈ ಬಾರಿಯ ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡಾ ವಿರುದ್ಧ ಒವರ್‌ನ 5 ಎಸೆತಗಳನ್ನು ಸಿಕ್ಸರ್ ಸಿಡಿಸಿ ಎಲ್ಲರ ಗಮನಸೆಳೆದಿದ್ದರು. 25 ವರ್ಷದ ಈ ಆಲ್ರೌಂಡರ್ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ವೇಗಿ ಅನ್ನೋದು ವಿಶೇಷ. ಕಳೆದ ವರ್ಷದ ಮುಂಬೈ ಲೀಗ್ ಟೂರ್ನಿಯಲ್ಲಿ ಪ್ರವೀಣ್ ತಾಂಬೆಯ ಓವರ್‌ನ 5 ಎಸೆತವನ್ನು ಸಿಕ್ಸರ್ ಸಿಡಿಸಿದ್ದರು. ಇದೀಗ RCB ತಂಡದ ಲಕ್ ಬದಲಿಸುವಲ್ಲಿ ಶಿವಂ ದುಬೆ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
 

click me!