IPL 2018: ಬ್ಯಾಟ್ಸ್’ಮನ್’ಗಳೇ ಸೋಲಿಗೆ ಕಾರಣ: ರಹಾನೆ

First Published May 25, 2018, 3:51 PM IST
Highlights

‘ನಾವು ಯಾವುದೇ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತು. ಕೊನೆ ಕೆಲ ಓವರ್‌ಗಳಲ್ಲಿ ಅಗತ್ಯವಿದ್ದಷ್ಟು ಬೌಂಡರಿಗಳನ್ನು ಬಾರಿಸಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಈ ತಪ್ಪುಗಳು ಆಗದಂತೆ ಎಚ್ಚೆತ್ತುಕೊಳ್ಳಬೇಕು’ ಎಂದು ರಹಾನೆ ಹೇಳಿದರು.

ಕೋಲ್ಕತಾ[ಮೇ.25]: ಕೆಕೆಆರ್ ವಿರುದ್ಧ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸೋಲುಂಡು, ಐಪಿಎಲ್’ನಿಂದ ಹೊರಬಿದ್ದ ಬಳಿಕ ರಾಜಸ್ಥಾನ ರಾಯಲ್ಸ್ ನಾಯಕ ಅಜಿಂಕ್ಯ ರಹಾನೆ ಬ್ಯಾಟ್ಸ್‌ಮನ್‌ಗಳೇ ಸೋಲಿಗೆ ಕಾರಣ ಎಂದಿದ್ದಾರೆ. 

170 ರನ್ ಗುರಿ ಬೆನ್ನಟ್ಟುತ್ತಾ ರಾಯಲ್ಸ್‌ಗೆ ಕೊನೆ 6 ಓವರ್‌ಗಳಲ್ಲಿ 61 ರನ್ ಬೇಕಿದ್ದವು. ಕೈಯಲ್ಲಿ 9 ವಿಕೆಟ್ ಇತ್ತು. ಆದರೆ ತಂಡ 25 ರನ್‌ಗಳ ಸೋಲುಂಡಿತು. ‘ನಾವು ಯಾವುದೇ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತು. ಕೊನೆ ಕೆಲ ಓವರ್‌ಗಳಲ್ಲಿ ಅಗತ್ಯವಿದ್ದಷ್ಟು ಬೌಂಡರಿಗಳನ್ನು ಬಾರಿಸಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಈ ತಪ್ಪುಗಳು ಆಗದಂತೆ ಎಚ್ಚೆತ್ತುಕೊಳ್ಳಬೇಕು’ ಎಂದು ರಹಾನೆ ಹೇಳಿದರು.

170 ರನ್’ಗಳ ಗುರಿ ಬೆನ್ನತ್ತುವಾಗ 17ನೇ ಓವರ್’ನಲ್ಲಿ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡಿದ್ದು ನಮ್ಮ ಹಿನ್ನಡೆಗೆ ಕಾರಣವಾಯಿತು. ಒತ್ತಡದ ಸನ್ನಿವೇಷದಲ್ಲಿ ಅಗ್ರಕ್ರಮಾಂಕದ ಬ್ಯಾಟ್ಸ್’ಮನ್ ಪೆವಿಲಿಯನ್ ಸೇರಿದ್ದು ತಂಡದ ಮೇಲೆ ಇನ್ನಷ್ಟು ಒತ್ತಡ ಉಂಟಾಗಲು ಕಾರಣವಾಯಿತು ಎಂದು ರಹಾನೆ ಹೇಳಿದ್ದಾರೆ.

ಎಲಿಮೀನೇಟರ್ ಪಂದ್ಯದಲ್ಲಿ ಕೋಲ್ಕತಾ ನೈಟ್’ರೈಡರ್ಸ್ ತಂಡವು ಗೆಲುವು ಸಾಧಿಸಿದ್ದು, ಇಂದು ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇಂದು ಜಯ ಸಾಧಿಸುವ ತಂಡವು 27 ರಂದು ಚೆನ್ನೈ ಸೂಪರ್’ಕಿಂಗ್ಸ್ ತಂಡವನ್ನು ಎದುರಿಸಲಿದೆ. 

click me!