ಭೂಪತಿಯಿಂದ ಸಾಕಷ್ಟು ಕಲಿತಿದ್ದೇನೆ: ಪಿಯರ್ಸ್

Published : May 25, 2018, 02:51 PM IST
ಭೂಪತಿಯಿಂದ ಸಾಕಷ್ಟು ಕಲಿತಿದ್ದೇನೆ: ಪಿಯರ್ಸ್

ಸಾರಾಂಶ

‘ಮಹೇಶ್'ರೊಂದಿಗೆ ಆಡುವುದು ನನ್ನ ಕನಸಾಗಿತ್ತು. ಯಾಕೆಂದರೆ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಅವರು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರೊಂದಿಗೆ ಆಡುವುದು ಬಹಳ ಆನಂದದಾಯಕವಾಗಿತ್ತು. ಸಾಕಷ್ಟು ಕಲಿಯಲು ಅವಕಾಶ ದೊರೆಯಿತು’ ಎಂದು ಹೇಳಿದರು.

ಬೆಂಗಳೂರು[ಮೇ.25]: ಬೆಂಗಳೂರು 1೦ಕೆ ಮ್ಯಾರಥಾನ್ ಓಟದ ರಾಯಭಾರಿಯಾಗಿ ಆಗಮಿಸಿರುವ ಫ್ರಾನ್ಸ್‌ನ ಮಾಜಿ ಟೆನಿಸ್ ಆಟಗಾರ್ತಿ ಮೇರಿ ಪಿಯರ್ಸ್, ತಮ್ಮೊಂದಿಗೆ ಅನೇಕ ಟೂರ್ನಿಗಳಲ್ಲಿ ಒಟ್ಟಿಗೆ ಆಡಿದ ಭಾರತದ ದಿಗ್ಗಜ ಟೆನಿಸಗ ಮಹೇಶ್ ಭೂಪತಿಯನ್ನು ಕೊಂಡಾಡಿದ್ದಾರೆ.
ಗುರುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಯರ್ಸ್, ತಮ್ಮ ವೃತ್ತಿಪರ ದಿನಗಳನ್ನು ನೆನೆಪಿಸಿಕೊಂಡರು. ‘ಮಹೇಶ್'ರೊಂದಿಗೆ ಆಡುವುದು ನನ್ನ ಕನಸಾಗಿತ್ತು. ಯಾಕೆಂದರೆ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಅವರು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರೊಂದಿಗೆ ಆಡುವುದು ಬಹಳ ಆನಂದದಾಯಕವಾಗಿತ್ತು. ಸಾಕಷ್ಟು ಕಲಿಯಲು ಅವಕಾಶ ದೊರೆಯಿತು’ ಎಂದು ಹೇಳಿದರು. 
ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಮೇರಿ ಪಿಯರ್ಸ್ 2006ರ ಗಾಯದ ಸಮಸ್ಯೆಗೆ ತುತ್ತಾಗಿ ಟೆನಿಸ್’ನಿಂದ ದೂರ ಸರಿದ ಅವರು ಆಧ್ಯಾತ್ಮಿಕ ಹಾದಿ ಹಿಡಿದಿದ್ದರು. ಇದೇವೇಳೆ ಪತ್ರಿಕಾಗೋಷ್ಠಿಯಲ್ಲಿ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್ ಕುರಿತಂತೆಯೂ ತಮ್ಮ ಅನುಭವವನ್ನು ಹಂಚಿಕೊಂಡರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!