
ನವದೆಹಲಿ(ಡಿ.01): 2018ರ ಐಪಿಎಲ್ ಆವೃತ್ತಿಯಲ್ಲಿ ಹಲವು ಬದಲಾವಣೆಗಳನ್ನು ತರಲು ಬಿಸಿಸಿಐ ತಯಾರಿ ನಡೆಸುತ್ತಿದ್ದು, ಅದರಲ್ಲಿ ಪಂದ್ಯಗಳನ್ನು ಒಂದು ಗಂಟೆ ಮುಂಚಿತವಾಗಿ ಆರಂಭಿಸುವುದು ಸಹ ಒಂದಾಗಿದೆ.
ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, ಆಡಳಿತ ಮಂಡಳಿ ಸಭೆ ವೇಳೆ ಪಂದ್ಯಗಳನ್ನು ರಾತ್ರಿ 8ರ ಬದಲಿಗೆ ಸಂಜೆ 7ಕ್ಕೆ ಆರಂಭಿಸಲು ಪ್ರಸ್ತಾಪಿಸಿದ್ದು ಎಲ್ಲಾ ಫ್ರಾಂಚೈಸಿಗಳು ಇದಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ. ಆದರೆ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಇಂಡಿಯಾ ಸಂಸ್ಥೆ ಸಮ್ಮತಿ ಸೂಚಿಸಿದರೆ ಮಾತ್ರ ಈ ಪ್ರಸ್ತಾಪ ಜಾರಿಗೆ ಬರಲಿದೆ ಎಂದು ಶುಕ್ಲಾ ಹೇಳಿದ್ದಾರೆ.
‘ರಾತ್ರಿ 8ಕ್ಕೆ ಪಂದ್ಯಗಳು ಆರಂಭವಾಗುವುದರಿಂದ ಅಭಿಮಾನಿಗಳು ಕ್ರೀಡಾಂಗಣದಿಂದ ಹೊರಡುವ ವೇಳೆಗೆ ಮಧ್ಯರಾತ್ರಿಯಾಗಲಿದೆ. ಮಳೆ ಅಡ್ಡಿಯಾದರೆ ಇನ್ನೂ ಹೆಚ್ಚು ಸಮಯ ಬೇಕಾಗಲಿದೆ. ಜತೆಗೆ ಮನೆಗಳಲ್ಲಿ ಮಕ್ಕಳು ಪಂದ್ಯಗಳನ್ನು ವೀಕ್ಷಿಸುವುದರಿಂದ ಅವರಿಗೂ ಸಹ ತೊಂದರೆಯಾಗಲಿದೆ. ಪ್ರೇಕ್ಷಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾಪ ಮಾಡಲಾಯಿತು. ಫ್ರಾಂಚೈಸಿಗಳು ಈ ಐಡಿಯಾವನ್ನು ಸ್ವಾಗತಿಸಿದ್ದಾರೆ. ಆದರೆ ಸ್ಟಾರ್ ಸಂಸ್ಥೆ ಒಪ್ಪಿದರೆ ಮಾತ್ರ ಇದು ಕಾರ್ಯರೂಪಕ್ಕೆ ಬರಲಿದೆ’ ಎಂದು ಶುಕ್ಲಾ ಹೇಳಿದ್ದಾರೆ.
ಒಂದೊಮ್ಮೆ ಸಂಜೆ 7ಕ್ಕೆ ಪಂದ್ಯಗಳನ್ನು ಆರಂಭಿಸಲು ನಿರ್ಧರಿಸಿದರೆ, ಸಂಜೆ 4ರ ಪಂದ್ಯ ಮಧ್ಯಾಹ್ನ 3ಕ್ಕೆ ಆರಂಭವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.