ಐಪಿಎಲ್: ಹೈದರಾಬಾದ್ ತಂಡಕ್ಕೆ ಇಬ್ಬರಲ್ಲಿ ಪೈಪೋಟಿ

By Suvarna Web DeskFirst Published Mar 28, 2018, 4:11 PM IST
Highlights

2014ರಲ್ಲಿಶಿಖರ್ಧವನ್ತಂಡದನಾಯಕರಾಗಿದ್ದರು. 2016ರಲ್ಲಿವಾರ್ನರ್ಅವರನ್ನುಸಾರಥಿಯನ್ನಾಗಿನೇಮಿಸಲಾಗಿತ್ತು.

ಮುಂಬೈ(ಮಾ.28): ಡೇವಿಡ್ ವಾರ್ನರ್ ಚಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್'ನಿಂದ ಒಂದು ವರ್ಷ ನಿಷೇಧಕ್ಕೆ ಒಳಗಾದ ನಂತರ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅಥವಾ ಮನೀಶ್ ಪಾಂಡೆ ಇವರಲ್ಲಿ ಒಬ್ಬರು ನೇಮಕವಾಗುವ ಸಾಧ್ಯತೆಯಿದೆ.

ವಾರ್ನರ್ ಅವರನ್ನು 2014ರಲ್ಲಿ ಐಪಿಎಲ್ ಹರಾಜಿನಲ್ಲಿ 5.5 ಕೋಟಿ ರೂ. ಮೊತ್ತಕ್ಕೆ ಹೈದರಾಬಾದ್ ತಂಡ ಖರೀದಿಸಿತ್ತು. 2014ರಲ್ಲಿ ಶಿಖರ್ ಧವನ್ ತಂಡದ ನಾಯಕರಾಗಿದ್ದರು. 2016ರಲ್ಲಿ ವಾರ್ನರ್ ಅವರನ್ನು  ಸಾರಥಿಯನ್ನಾಗಿ ನೇಮಿಸಲಾಗಿತ್ತು. 2016ರಲ್ಲಿ ಐಪಿಎಲ್ ಫೈನಲ್ ಪಂದ್ಯದಲ್ಲಿ  ಆರ್'ಸಿಬಿಯನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮನೀಶ್ ಪಾಂಡೆ ಅವರು ಹರಾಜಿನಲ್ಲಿ 11 ಕೋಟಿಗೆ ಹರಾಜಾಗಿದ್ದರು.

ಸ್ಟಿವ್ ಸ್ಮಿತ್ ಅವರನ್ನು 2 ದಿನಗಳ ಹಿಂದಷ್ಟೆ ರಾಜಸ್ಥಾನ್ ತಂಡದ ನಾಯಕ ಸ್ಥಾನದಿಂದ ಕೈಬಿಟ್ಟು ಅಜಿಂಕ್ಯ ರಹಾನೆ ಅವರನ್ನು ನೇಮಿಸಲಾಗಿತ್ತು.

click me!