
ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಒಂದು ವರ್ಷ ಆಸ್ಟ್ರೇಲಿಯಾ ತಂಡದಿಂದ ನಿಷೇಧಕ್ಕೆ ಗುರಿಯಾಗಿರುವ ಸ್ಟೀವ್ ಸ್ಮಿತ್ ಇದೀಗ ಐಪಿಎಲ್'ನಿಂದಲೂ ಹೊರಬಿದ್ದಿದ್ದಾರೆ. ನಿನ್ನೆಯಷ್ಟೇ ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಹಿಂದೆ ಸರಿದಿದ್ದ ಸ್ಮಿತ್ ಪ್ರಸಕ್ತ ಸಾಲಿನ ಐಪಿಎಲ್'ನಲ್ಲೂ ಪಾಲ್ಗೊಳ್ಳುತ್ತಿಲ್ಲ. ಸ್ಮಿತ್ ಅನುಪಸ್ಥಿತಿಯಲ್ಲಿ ರಾಜಸ್ಥಾನ ರಾಯಲ್ಸ್ ಕಣಕ್ಕಿಳಿಯುತ್ತಿದ್ದು, ಈ ಕೆಳಕಂಡ ಟಾಪ್ 5 ಆಟಗಾರರು ಸ್ಮಿತ್ ಸ್ಥಾನ ತುಂಬುವ ಸಾಧ್ಯತೆಯಿದೆ..
#5 ಲಿಂಡ್ಲೆ ಸಿಮೊನ್ಸ್:
ವಿಂಡಿಸ್ ಸ್ಫೋಟಕ ಬ್ಯಾಟ್ಸ್'ಮನ್, 2015ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ ಆಟಗಾರ. 1.5 ಕೋಟಿ ಮುಖಬೆಲೆ ಹೊಂದಿದ್ದ ಸಿಮೊನ್ಸ್'ರನ್ನು ಈ ಬಾರಿ ಯಾವ ಪ್ರಾಂಚೈಸಿಯೂ ಹರಾಜಿನಲ್ಲಿ ಖರೀದಿಸುವ ಮನಸ್ಸು ಮಾಡಿಲ್ಲ. ಇದುವರೆಗೂ 29 ಐಪಿಎಲ್ ಪಂದ್ಯಗಳನ್ನಾಡಿ ಸುಮಾರು 40 ಸರಾಸರಿಯಂಎತೆ 1079 ರನ್ ಬಾರಿಸಿದ್ದಾರೆ.
#4. ರೋಮನ್ ಪೋವೆಲ್:
ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದಲ್ಲಿ ಕಾಣಿಸಿಕೊಂಡಿದ್ದ ರೋಮನ್ ಪೋವೆಲ್ ಕೂಡಾ ಸ್ಮಿತ್ ಬದಲಿಗೆ ಈ ಆರ್.ಆರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು. ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವಕಪ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಕೇವಲ 44 ಎಸೆತಗಳಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದ ಪೋವೆಲ್, ಆರಂಭಿಕನಾಗಿ ಕೂಡಾ ಬ್ಯಾಟ್ ಬೀಸುವ ಕ್ಷಮತೆಯನ್ನು ಹೊಂದಿದ್ದಾರೆ.
#3. ಇಯಾನ್ ಮಾರ್ಗನ್:
RCB, KKR, SRH ಹಾಗೂ KXIP ತಂಡವನ್ನು ಪ್ರತಿನಿಧಿಸಿದ್ದ ಮಾರ್ಗನ್ ಈ ಬಾರಿ ಹರಾಜಾಗದೇ ಇರುವುದು ಸಾಕಷ್ಟು ಅಚ್ಚರಿಗೆ ಸಾಕ್ಷಿಯಾಗಿತ್ತು. ಸ್ಫೋಟಕವಾಗಿ ಬ್ಯಾಟ್ ಬೀಸುವ ಸಾಮರ್ಥ್ಯವಿರುವ ಇಂಗ್ಲೆಂಡ್ ಸೀಮಿತ ತಂಡದ ನಾಯಕನನ್ನು ರಾಜಸ್ಥಾನ ರಾಯಲ್ಸ್ ತಂಡ ಖರೀಧಿಸುವ ಮನಸ್ಸು ಮಾಡಬಹುದು.
#2. ಇಶ್ ಸೋಧಿ:
ರಾಜಸ್ಥಾನ ರಾಯಲ್ಸ್ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ಬಗ್ಗೆ ಏನಾದರೂ ಯೋಚಿಸಿದರೆ ನ್ಯೂಜಿಲೆಂಡ್ ವೇಗಿ ಇಶ್ ಸೋಧಿ ಉತ್ತಮ ಆಯ್ಕೆಯಾಗಬಲ್ಲರು. ಪ್ರಸ್ತುತ ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಸೋಧಿ, ರಾಜಸ್ಥಾನ ತಂಡಕ್ಕೆ ಮತ್ತಷ್ಟು ಬಲ ತಂದುಕೊಡಬಹುದು. ಇದುವರೆಗೂ 32 ಟಿ20 ಪಂದ್ಯದಲ್ಲಿ 102 ವಿಕೆಟ್ ಕಬಳಿಸಿರುವ ಸೋಧಿ ರಾಯಲ್ಸ್ ತಂಡದ ನೆಚ್ಚಿನ ಆಯ್ಕೆಯಾಗಬಲ್ಲರು.
#1. ಜೋ ರೂಟ್:
ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಕ್ರಿಕೆಟಿಗ ಜೋ ರೂಟ್ ಇದೇ ಮೊದಲ ಬಾರಿಗೆ ಐಪಿಎಲ್'ನಲ್ಲಿ ಪಾಲ್ಗೊಳ್ಳಲು ಹೆಸರನ್ನು ನೋಂದಾಯಿಸಿದ್ದರು. ಆದರೆ ದುರಾದೃಷ್ಟಕ್ಕೆ ಯಾವೊಬ್ಬ ಪ್ರಾಂಚೈಸಿಯೂ ರೂಟ್ ಅವರನ್ನು ಹರಾಜಿನಲ್ಲಿ ಖರೀದಿಸಿರಲಿಲ್ಲ. ಸಮಕಾಲೀನ ಕ್ರಿಕೆಟ್'ನಲ್ಲಿ ವಿರಾಟ್ ಕೊಹ್ಲಿಯಷ್ಟೇ ಪ್ರತಿಭಾನ್ವಿತ ಆಟಗಾರನೆನಿಸಿಕೊಂಡಿರುವ ರೂಟ್ ಅವರನ್ನು ಸ್ಮಿತ್ ಬದಲಿಗೆ ತಂಡಕ್ಕೆ ಸೇರಿಸಿಕೊಂಡರೂ ಅಚ್ಚರಿಯಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.