
ಮುಂಬೈ[ಮೇ.05] ಐಪಿಎಲ್ 12ನೇ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ರೋಚಕ ಹಣಾಹಣಿ ನಡೆಯಲಿದೆ.
ವಾಂಖೇಡೆ ಕ್ರೀಡಾಂಗಣ ಈ ಎರಡೂ ತಂಡಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಶುಕ್ರವಾರ ಪಂಜಾಬ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ ಪ್ಲೇ-ಆಫ್ ಆಸೆಯನ್ನು ಜೀವಂತ ವಾಗಿರಿಸಿಕೊಂಡಿರುವ ಕೋಲ್ಕತಾ, ಮುಂಬೈ ವಿರುದ್ಧ ಗೆದ್ದರೇ ಪ್ಲೇ-ಆಫ್ ಗೇರುವುದು ಖಚಿತವಾಗಲಿದೆ. ಸೋತರೆ ಹೊರಬೀಳಲಿದೆ.
ಪಿಚ್ ರಿಪೋರ್ಟ್:
ವಾಂಖೇಡೆ ಕ್ರೀಡಾಂಗಣ ಬೌಲಿಂಗ್ ಸ್ನೇಹಿ ಪಿಚ್ ಆಗಿದೆ. ಇಲ್ಲಿ ನಡೆದಿರುವ ಕಳೆದ 5 ಪಂದ್ಯಗಳಲ್ಲೂ ದೊಡ್ಡ ಮೊತ್ತ ದಾಖಲಾಗಿದೆ. ಕೊನೆಯ 3 ಪಂದ್ಯಗಳಲ್ಲಿ ಮೊದಲು ಫೀಲ್ಡಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ವೇಗಿಗಳಿಗೆ ಪಿಚ್ ಹೆಚ್ಚಿನ ನೆರವು ನೀಡಲಿದೆ. ಇಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ.
ಸಂಭಾವ್ಯ ತಂಡ ಹೀಗಿದೆ:
ಮುಂಬೈ ಇಂಡಿಯನ್ಸ್: ರೋಹಿತ್ (ನಾಯಕ), ಡಿಕಾಕ್, ಸೂರ್ಯ, ಲೆವಿಸ್, ಹಾರ್ದಿಕ್, ಪೊಲ್ಲಾರ್ಡ್, ಕೃನಾಲ್, ಸ್ರಾನ್, ರಾಹುಲ್, ಬುಮ್ರಾ, ಮಾಲಿಂಗ
ಕೋಲ್ಕತಾ ನೈಟ್’ರೈಡರ್ಸ್: ಶುಭ್‌ಮನ್, ಲಿನ್, ಉತ್ತಪ್ಪ, ರಸೆಲ್, ಕಾರ್ತಿಕ್(ನಾಯಕ), ನರೈನ್, ನಿತೀಶ್, ರಿಂಕು, ಪೀಯೂಷ್, ಗುರ್ನೆ, ಸಂದೀಪ್ ವಾರಿಯರ್
ಸ್ಥಳ: ಮುಂಬೈ
ಆರಂಭ: ರಾತ್ರಿ 8ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.