ಮುಂಬೈ ಟಿ20: 5 ಲಕ್ಷ ರುಪಾಯಿಗೆ ತೆಂಡುಲ್ಕರ್ ಪುತ್ರ ಖರೀದಿ

Published : May 05, 2019, 11:50 AM IST
ಮುಂಬೈ ಟಿ20: 5 ಲಕ್ಷ ರುಪಾಯಿಗೆ ತೆಂಡುಲ್ಕರ್ ಪುತ್ರ ಖರೀದಿ

ಸಾರಾಂಶ

ಮುಂಬೈ ಟಿ20 ಲೀಗ್‌ಗೆ ಶನಿವಾರ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ನಡೆಯಿತು. ಆಲ್ರೌಂಡರ್‌ಗಳ ವಿಭಾಗದಲ್ಲಿದ್ದ ಅರ್ಜುನ್, ಮೂಲ ಬೆಲೆ ₹1 ಲಕ್ಷ ನಿಗದಿಯಾಗಿತ್ತು.

ಮುಂಬೈ[ಮೇ.05]: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ₹5 ಲಕ್ಷಕ್ಕೆ ಆಕಾಶ್ ಟೈಗರ್ಸ್‌ ಮುಂಬೈ ವೆಸ್ಟರ್ನ್ ಸಬರ್ಬ್ ತಂಡದ ಪಾಲಾಗಿದ್ದಾರೆ. 

ಮುಂಬೈ ಟಿ20 ಲೀಗ್‌ಗೆ ಶನಿವಾರ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ನಡೆಯಿತು. ಆಲ್ರೌಂಡರ್‌ಗಳ ವಿಭಾಗದಲ್ಲಿದ್ದ ಅರ್ಜುನ್, ಮೂಲ ಬೆಲೆ ₹1 ಲಕ್ಷ ನಿಗದಿಯಾಗಿತ್ತು. ಹರಾಜಿನ ವೇಳೆ ನಾರ್ಥ್ ಮುಂಬೈ ಪ್ಯಾಂಥರ್ಸ್‌ ₹5 ಲಕ್ಷ ಬಿಡ್ ಕೂಗಿತು. ಆದರೆ, ಪಂದ್ಯಾವಳಿಯ ನಿಯಮದಂತೆ ಲೀಗ್‌ನಲ್ಲಿ ಹೊಸದಾಗಿ ಪಾಲ್ಗೊಳ್ಳುತ್ತಿರುವ ತಂಡ ಗಳಿಗೆ ಬೇರೊಂದು ತಂಡವು ಬಿಡ್ ಮಾಡಿರುವ ಆಟಗಾರರನ್ನು ಅಷ್ಟೇ ಮೊತ್ತ ನೀಡಿ ತಮ್ಮದಾಗಿಸಿಕೊಳ್ಳುವ ಅವಕಾಶವಿದೆ. 

ಹರಾಜಿಗೂ ಮುನ್ನ ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಅವರನ್ನು 6 ಪ್ರಾಂಚೈಸಿಗಳು ರೀಟೈನ್ ಮಾಡಿಕೊಂಡಿವೆ. ಈ ಟೂರ್ನಿಗೆ ಸಚಿನ್ ತೆಂಡುಲ್ಕರ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಕ್ಸ್‌, ಫೋರ್‌ ಸುರಿಮಳೆ ಸುರಿಸಿರೋ ವೈಭವ್‌ ಸೂರ್ಯವಂಶಿ; ಸಾಕ್ಷಿ ಸಮೇತ Unprofessional ಎಂದ ಜಿತೇಶ್‌ ಶರ್ಮಾ!
ಆರೆಂಜ್ ಕ್ಯಾಪ್ ರೇಸ್: ಟಾಪ್-10 ಪಟ್ಟಿಯೊಳಗೆ ಎಂಟ್ರಿಕೊಟ್ಟ ಸಂಜು ಸ್ಯಾಮ್ಸನ್!