ಹೀಗಿತ್ತು ನೋಡಿ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಫೈನಲ್ ದಾರಿ

By Web DeskFirst Published May 12, 2019, 4:00 PM IST
Highlights

12ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಫೈನಲ್’ವರೆಗಿನ ಏಳು-ಬೀಳಿನ ಹಾದಿ ಹೇಗಿತ್ತು ಎನ್ನುವುದನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಹೈದರಾಬಾದ್[ಮೇ.12]: ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ತಂಡ ದಾಖಲೆಯ 8ನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್’ನ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಮೂಲಕ 10 ಆವೃತ್ತಿಗಳಲ್ಲೂ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎನ್ನುವ ಕೀರ್ತಿಗೆ ಪಾತ್ರವಾಗಿರುವ ಧೋನಿ ಪಡೆ 4ನೇ ಚಾಂಪಿಯನ್ ಪಟ್ಟದತ್ತ ಕಣ್ಣಿಟ್ಟಿದೆ.

12ನೇ ಆವೃತ್ತಿಯ ಆರಂಭದಲ್ಲಿ ಅಕ್ಷರಶಃ ಅಬ್ಬರಿಸಿದ್ದ ಚೆನ್ನೈ ಸೂಪರ್’ಕಿಂಗ್ಸ್ ತಂಡ ಮೊದಲ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, ಕೇವಲ ಒಮ್ಮೆ ಮಾತ್ರ ಮುಗ್ಗರಿಸಿತ್ತು. ಆದರೆ ಲೀಗ್ ಹಂತದ ಕೊನೆಯ 6 ಹಾಗೂ ಮೊದಲ ಕ್ವಾಲಿಫೈಯರ್ ಸೇರಿ ಒಟ್ಟು 7 ಪಂದ್ಯಗಳಲ್ಲಿ 5 ಪಂದ್ಯ ಸೋತು ಹಿನ್ನಡೆ ಅನುಭವಿಸಿತ್ತು. ಆದರೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿದ ಚೆನ್ನೈ ಸೂಪರ್’ಕಿಂಗ್ಸ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದು ಮತ್ತೊಮ್ಮೆ ಕಪ್ ಎತ್ತಿಹಿಡಿಯುವ ತವಕದಲ್ಲಿದೆ.

ಹೀಗಿತ್ತು ನೋಡಿ ಮುಂಬೈ ಇಂಡಿಯನ್ಸ್ ತಂಡದ ಫೈನಲ್ ದಾರಿ

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಫೈನಲ್’ವರೆಗಿನ ಏಳು-ಬೀಳಿನ ಹಾದಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ...

ಚೆನ್ನೈ ಸೂಪರ್’ಕಿಂಗ್ಸ್ ಫೈನಲ್ ದಾರಿ...

1. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ  7 ವಿಕೆಟ್’ಗಳ ಜಯ

2. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್’ಗಳ ಜಯ

3. ರಾಜಸ್ಥಾನ ರಾಯಲ್ಸ್ ವಿರುದ್ಧ 8 ರನ್’ಗಳ ಜಯ

4. ಮುಂಬೈ ಇಂಡಿಯನ್ಸ್ ವಿರುದ್ಧ 37 ರನ್’ಗಳ ಸೋಲು

5. ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ 22 ರನ್’ಗಳ ಜಯ

6. ಕೋಲ್ಕತಾ ನೈಟ್’ರೈಡರ್ಸ್ ವಿರುದ್ಧ 7 ವಿಕೆಟ್’ಗಳ ಜಯ

7. ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್’ಗಳ ಜಯ

8. ಕೋಲ್ಕತಾ ನೈಟ್’ರೈಡರ್ಸ್ ವಿರುದ್ಧ 5 ವಿಕೆಟ್’ಗಳ ಜಯ

9. ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್’ಗಳ ಸೋಲು

10. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 01 ರನ್’ಗಳ ಸೋಲು

11. ಸನ್’ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್’ಗಳ ಜಯ

12. ಮುಂಬೈ ಇಂಡಿಯನ್ಸ್ ವಿರುದ್ಧ 46 ರನ್’ಗಳ ಸೋಲು

13. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 80 ರನ್’ಗಳ ಜಯ

14. ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ 6 ವಿಕೆಟ್’ಗಳ ಸೋಲು

ಮೊದಲ ಕ್ವಾಲಿಫೈಯರ್:
ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್’ಗಳ ಸೋಲು

ಎರಡನೇ ಕ್ವಾಲಿಫೈಯರ್:
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್’ಗಳ ಗೆಲುವು.

click me!