ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಕೊಹ್ಲಿ ಟೆನ್ಶನ್ ಹೆಚ್ಚಿದ್ದು ಯಾಕೆ?

First Published Jun 30, 2018, 8:23 PM IST
Highlights

ಐರ್ಲೆಂಡ್ ವಿರುದ್ಧದ ಸರಣಿ ಗೆದ್ದ ಬೆನ್ನಲ್ಲೇ, ಟೀಂ ಇಂಡಿಯಾಗೆ ಶಾಕ್ ಎದುರಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತದ ಪ್ರಮುಖ ಬೌಲರ್ ಅಲಭ್ಯರಾಗಿದ್ದಾರೆ. ಆ ಬೌಲರ್ ಯಾರು? ದಿಢೀರ್ ಅಲಭ್ಯತೆಗೆ ಕಾರಣವೇನು? ಇಲ್ಲಿದೆ ವಿವರ

ನವ ದೆಹಲಿ(ಜೂ.30): ಐರ್ಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದ ಇದೀಗ ಇಂಗ್ಲೆಂಡ್ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಭಾರತ ತಂಡದ ಪ್ರಮುಖ ಬೌಲರ್ ಜಸ್‌ಪ್ರೀತ್ ಬುಮ್ರಾ ಇಂಜುರಿಯಿಂದ ಇಂಗ್ಲೆಂಡ್ ಸರಣಿಗೆ ಅಲಭ್ಯರಾಗಿದ್ದಾರೆ.

ಇಂಗ್ಲೆಂಡ್ ವಿರುದ್ದದ 3 ಟಿ20 ಹಾಗೂ 3 ಏಕದಿನ ಸರಣಿಗೆ ಬುಮ್ರಾ ಅಲಭ್ಯರಾಗಿದ್ದಾರೆ. ಹೀಗಾಗಿ ಬುಮ್ರಾ ಸದ್ಯ ವಿಶ್ರಾಂತಿಗಾಗಿ ತವರಿಗೆ ವಾಪಾಸ್ಸಾಗಲಿದ್ದಾರೆ. ಆದರೆ ಆಗಸ್ಟ್‌ನಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬುಮ್ರಾ ಕಣಕ್ಕಿಳಿಯೋ ಸಾಧ್ಯತೆ ಇದೆ.

ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಕೈಬೆರಳಿಗೆ ಗಾಯವಾಗಿತ್ತು. ಹೀಗಾಗಿ ಬುಮ್ರಾ ಸೇವೆ ಅಲಭ್ಯವಾಗಿದೆ. ಭಾರತ ತಂಡದ ಪ್ರಮುಖ ಬೌಲರ್ ಆಗಿರೋ ಬುಮ್ರಾ ಅಲಭ್ಯತೆ ಟೀಂ ಇಂಡಿಯಾಗೆ ಕಾಡಲಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ಭಾರತ ತಂಡಕ್ಕೆ ಮತ್ತಷ್ಟು ಕಠಿಣವಾಗಿದೆ.
 

click me!