
ಡಬ್ಲಿನ್(ಜೂ.30): ಸಾಮಾಜಿಕ ಜಾಲತಾಣದಲ್ಲಿ ಸವಾಲು ನೀಡೋದು ಸಾಮಾನ್ಯವಾಗಿದೆ. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನೂತನ ಕಿಟ್ ಅಪ್ ಚಾಲೆಂಜ್ ನೀಡಿದ್ದಾರೆ. ಕ್ರೀಡಾಪಟುಗಳು ಹಾಗೂ ಕ್ರಿಕೆಟಿಗರಿಗೆ ಸಚಿನ್ ಕಿಟ್ ಅಪ್ ಚಾಲೆಂಜ್ ಸವಾಲು ಹಾಕಿದ್ದರು.
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬ್ಯೂಸಿಯಾಗಿದ್ದ ಕೊಹ್ಲಿ, ಸಚಿನ್ ಚಾಲೆಂಜ್ ಸ್ವೀಕರಿಸಿರಲಿಲ್ಲ. ಇದೀಗ ಸರಣಿ ಗೆಲುವಿನ ಬಳಿಕ ಸಚಿನ್ ಚಾಲೆಂಜ್ ಸ್ವೀಕರಿಸಿದ್ದಾರೆ. ಸ್ಪೊರ್ಟ್ಸ್ ಕಿಟ್ ಕಟ್ಟಿ ಸಚಿನ್ ಸವಾಲನ್ನ ಕೊಹ್ಲಿ ಸ್ವೀಕರಿಸಿದರು.
ಸಚಿನ್ ತೆಂಡೂಲ್ಕರ್ ಈ ಸವಾಲನ್ನ ಭಾರತದ ಫುಟ್ಬಾಲ್ ಪಟು ಸಂದೇಶ್ ಜಿಂಗನ್, ಹಾಕಿ ಪಟು ಸರ್ದಾರ್ ಸಿಂಗ್, ಬ್ಯಾಡ್ಮಿಂಟನ್ ಪಟು ಕಿಡಂಬಿ ಶ್ರೀಕಾಂತ್ ಹಾಗೂ ಪಿವಿ ಸಿಂಧೂ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹಿಳಾ ನಾಯಕಿ ಮಿಥಾಲಿ ರಾಜ್‌ಗೆ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿರುವ ವಿರಾಟ್ ಕೊಹ್ಲಿ, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಆಟಗಾರ ಪಾರ್ಥೀವ್ ಪಟೇಲ್‌ಗೆ ಸವಾಲು ಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.