ಏಕದಿನ, ಟಿ20 ವಿಶ್ವಕಪ್ ಹಾಗೂ ಐಪಿಎಲ್, ಮೂರು ಪ್ರಶಸ್ತಿ ಗೆದ್ದ ಭಾರತೀಯರು ಯಾರು?

First Published Jun 30, 2018, 7:49 PM IST
Highlights

ಐಸಿಸಿ ಟ್ರೋಫಿ, ಲೀಗ್ ಟ್ರೋಫಿಗಳನ್ನ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ. ಇದು ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಕೆಲ ಭಾರತೀಯ ಕ್ರಿಕೆಟಿಗರು, ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಐಪಿಎಲ್ ಟ್ರೋಫಿಗಳನ್ನೂ ಗೆದ್ದಿದ್ದಾರೆ. ಹಾಗಾದರೆ ಈ ಸಾಧನೆ ಮಾಡಿದ ಕ್ರಿಕೆಟಿಗರು ಯಾರು? ಇಲ್ಲಿದೆ ಡಿಟೇಲ್ಸ್.

ಬೆಂಗಳೂರು(ಜೂ.30): ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಹಾಗೂ ಐಪಿಎಲ್ ಟೂರ್ನಿ ಈ ಮೂರು ಕ್ರಿಕೆಟ್ ಸರಣಿಗಳು ಅತ್ಯಂತ ಮಹತ್ವ ಹಾಗೂ ವಿಶೇಷ. ಪ್ರತಿ ತಂಡಕ್ಕೂ, ಪ್ರತಿ ಕ್ರಿಕೆಟ್ ಆಟಗಾರ ವಿಶ್ವಕಪ್ ಹಾಗೂ ಐಪಿಎಲ್ ಗೆಲ್ಲಲು ಶತಾಯಗತಾಯ ಪ್ರಯತ್ನಿಸುತ್ತಾರೆ. ಆದರೆ ಎಲ್ಲರಿಗೆ ಅದೃಷ್ಠ ಒಲಿಯುವುದಿಲ್ಲ. ಆದರೆ ಈ ಮೂರು ಪ್ರಶಸ್ತಿ ಗೆಲ್ಲುವಲ್ಲಿ ಕೆಲ ಭಾರತೀಯ ಕ್ರಿಕೆಟಿಗರು ಯಶಸ್ವಿಯಾಗಿದ್ದಾರೆ.

ಎಂ ಎಸ್ ಧೋನಿ

ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಹಾಗೂ ಕ್ರಿಕೆಟಿಗ ಎಂ ಎಸ್ ಧೋನಿ. 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ದಾಖಲೆ ಬರೆದ ಧೋನಿ, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದರು. ಇನ್ನು ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸಿದ ಧೋನಿ 2010,2011 ಹಾಗೂ 2018ರಲ್ಲಿ ಮೂರು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.

ಯುವರಾಜ್ ಸಿಂಗ್

ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನಲ್ಲಿ ಯುವರಾಜ್ ಸಿಂಗ್ ಪಾತ್ರ ಪ್ರಮುಖವಾಗಿದೆ. 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ ಯುವಿ, ಚೊಚ್ಚಲ ಟಿ20 ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್, ಏಕದಿನ ವಿಶ್ವಕಪ್ ಗೆದ್ದುು ಸಂಭ್ರಮಿಸಿದರು. 2016ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದ ಯುವಿ, ಐಪಿಎಲ್ ಟ್ರೋಫಿಗೂ ಮುತ್ತಿಕ್ಕಿದರು.

ಹರ್ಭಜನ್ ಸಿಂಗ್


ಟೀಂ ಇಂಡಿಯಾ ಟರ್ಬನೇಟರ್ ಹರ್ಭಜನ್ ಸಿಂಗ್ ಸದ್ಯ ತಂಡದಿಂದ ಹೊರಗುಳಿದಿದ್ದಾರೆ. ಆದರೆ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹರ್ಭಜನ್ ಸಿಂಗ್ ಭಾರತದ ಕೀ ಪ್ಲೇಯರ್ ಆಗಿದ್ದರು. ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲುವಿನ ಸಿಹಿ ಕಂಡಿದ್ದಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ 4 ಪ್ರಶಸ್ತಿ ಗೆಲುವಿನಲ್ಲಿ ಹರ್ಭಜನ್ ಭಾಗಿಯಾಗಿದ್ದಾರೆ. 2013,2015,2017 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಭಜ್ಜಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿದ್ದರು. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದ ಹರ್ಭಜನ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ.

ಗೌತಮ್ ಗಂಭೀರ್


ಟೀಂ ಇಂಡಿಯಾ ಡ್ಯಾಶಿಂಗ್ ಒಪನರ್ ಗೌತಮ್ ಗಂಭೀರ್, 2007ರ ಟಿ20 ಹಾಗೂ 2011ರ ವಿಶ್ವಕಪ್ ಗೆಲುವಿನ ತಂಡದ ಪ್ರಮುಖ ಸದಸ್ಯರಾಗಿದ್ದರು.  2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 97 ರನ್ ಸಿಡಿಸಿ ಗೆಲುವಿಗೆ ಕಾರಣರಾಗಿದ್ದರು. ಇನ್ನು ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ  ನೈಟ್ ರೈಡರ್ಸ್ ತಂಡದ ನಾಯಕನಾಗಿ 2012 ಹಾಗೂ 2014ರಲ್ಲಿ ಟ್ರೋಫಿ ಗೆದ್ದಿದ್ದಾರೆ.

ಯೂಸುಫ್ ಪಠಾಣ್


ಸಹೋದರ ಇರ್ಫಾನ್ ಪಠಾಣ್‌ನಿಂದ ಮುಖ್ಯವಾಹಿನಿಗೆ ಬಂದ ಯೂಸುಫ್ ಪಠಾಣ್, ಸ್ಫೋಟಕ ಬ್ಯಾಟಿಂಗ್ ಮೂಲಕ ಜನಪ್ರೀಯರಾದರು. ಇಷ್ಟೇ ಅಲ್ಲ ವಿಶ್ವಕಪ್‌ನಲ್ಲಿಇರ್ಫಾನ್‌ಗಿಂತ ಯೂಸುಫ್ ಸಾಧನೆಯೇ ಹೆಚ್ಚು. 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2008 ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಯೂಸುಫ್ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಪಿಯೂಷ್ ಚಾವ್ಲಾ


17ನೇ ವಯಸ್ಸಿಗೆ ಟೀಂ ಇಂಡಿಯಾಗೆ ಕಾಲಿಟ್ಟ ಪಿಯೂಷ್ ಚಾವ್ಲ, 2007 ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನ ತಂಡದ ಸದಸ್ಯರಾಗಿದ್ದರು. 2014ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಶಸ್ತಿ ಗೆಲುವಿನಲ್ಲಿ ಚಾವ್ಲ ಮೋಡಿ ಮಾಡಿದ್ದರು.

click me!