ಆಡುತ್ತಿದ್ದಾರೆ. 3 ಹಂತಗಳಲ್ಲಿ ಟೂರ್ನಿ ನಡೆಯಲಿದೆ. ಮೊದಲ ಹಂತ ಮೇ 13 ರಿಂದ 21 ರವರೆಗೆ ಪುಣೆಯಲ್ಲಿ, 2ನೇ ಹಂತ ಮೇ 24 ರಿಂದ 29 ರವರೆಗೆ ಮೈಸೂರಿನಲ್ಲಿ ಹಾಗೂ 3ನೇ ಹಂತ ಜೂನ್ 1 ರಿಂದ 4 ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ನ್ಯೂ ಕಬಡ್ಡಿ ಸಂಸ್ಥೆಯ ನಿರ್ದೇಶಕ ರವಿಕಿರಣ್ ತಿಳಿಸಿದ್ದಾರೆ.
ಪುಣೆ[ಮೇ.13]: ದೇಸಿ ಕ್ರೀಡೆ ಕಬಡ್ಡಿಯಲ್ಲಿ ಮತ್ತೊಂದು ಫ್ರಾಂಚೈಸಿ ಲೀಗ್ ಆರಂಭಗೊಳ್ಳುತ್ತಿದೆ. ಅಮೆಚೂರ್ ಕಬಡ್ಡಿ ಸಂಸ್ಥೆ ವಿರುದ್ಧ ಬಂಡಾಯ ಎದ್ದಿರುವ ನ್ಯೂ ಕಬಡ್ಡಿ ಫೆಡರೇಷನ್, ಪ್ರೊ ಕಬಡ್ಡಿಗೆ ಪರಾರಯಯವಾಗಿ ಸೋಮವಾರದಿಂದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್(ಐಐಪಿಕೆಲ್)ನ್ನು ನಡೆಸುತ್ತಿದೆ. ಪುಣೆಯ ಬಾಲೆವಾಡಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪುಣೆ ಪ್ರೈಡ್ ಹಾಗೂ ಹರಾರಯಣ ಹೀರೋಸ್ ಎದುರಾಗಲಿವೆ.
ಕರ್ನಾಟಕ ರಾಜ್ಯದ ವಿವಿಧ ಭಾಗಗಳ 13 ಆಟಗಾರರು ಬಂಡಾಯ ಲೀಗ್‌ನಲ್ಲಿ ಆಡುತ್ತಿದ್ದಾರೆ. 3 ಹಂತಗಳಲ್ಲಿ ಟೂರ್ನಿ ನಡೆಯಲಿದೆ. ಮೊದಲ ಹಂತ ಮೇ 13 ರಿಂದ 21 ರವರೆಗೆ ಪುಣೆಯಲ್ಲಿ, 2ನೇ ಹಂತ ಮೇ 24 ರಿಂದ 29 ರವರೆಗೆ ಮೈಸೂರಿನಲ್ಲಿ ಹಾಗೂ 3ನೇ ಹಂತ ಜೂನ್ 1 ರಿಂದ 4 ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ನ್ಯೂ ಕಬಡ್ಡಿ ಸಂಸ್ಥೆಯ ನಿರ್ದೇಶಕ ರವಿಕಿರಣ್ ತಿಳಿಸಿದ್ದಾರೆ.
ಪ್ರೊ ಕಬಡ್ಡಿಯಲ್ಲಿ ಆಡಿದ ಸುಮಾರು 15ಕ್ಕೂ ಹೆಚ್ಚು ಆಟಗಾರರು ಐಐಪಿಕೆಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೊ ಕಬಡ್ಡಿ ಆಟಗಾರ ಶಶಾಂಕ್ ವಾಂಖಡೆ ‘ಮುಂಬೈ ಚೆ ರಾಜೇ’ ತಂಡದ ನಾಯಕರಾಗಿದ್ದಾರೆ. ಇನ್ನೂ ಸುನಿಲ್ ಜಯಪಾಲ್, ಮನೋಜ್ ಕುಮಾರ್, ವಿಪಿನ್ ಮಲ್ಲಿಕ್, ಕುಲ್ದೀಪ್ ಸಿಂಗ್ ಹಾಗೂ ರಾಕೇಶ್ ಸೇರಿದಂತೆ ಇತರೆ ಆಟಗಾರರು ಪ್ರೊ ಕಬಡ್ಡಿಯಿಂದ ವಲಸೆ ಬಂದಿದ್ದಾರೆ.
16 ವಿದೇಶಿ ಆಟಗಾರರು
ಲೀಗ್‌ನಲ್ಲಿ 16 ವಿದೇಶಿ ಆಟಗಾರರು ವಿವಿಧ ತಂಡಗಳಲ್ಲಿ ಆಡಲಿದ್ದಾರೆ. 8 ಫ್ರಾಂಚೈಸಿಗಳಾದ ದಿಲೇರ್ ಡೆಲ್ಲಿ, ಹರಾರಯಣ ಹಿರೋಸ್, ಚೆನ್ನೈ ಚಾಲೆಂಜರ್ಸ್, ಮುಂಬೈ ಚೆ ರಾಜೇ, ಪುಣೆ ಪ್ರೈಡ್, ಬೆಂಗಳೂರು ರೈನೋಸ್, ಪಾಂಡಿಚೇರಿ ಪ್ರೆಡಟರ್ಸ್ ಹಾಗೂ ತೆಲುಗು ಬುಲ್ಸ್ ತಂಡಗಳು 19 ದಿನಗಳ ಕಾಲ ನಡೆಯಲಿರುವ ಟೂರ್ನಿಯ 44 ಪಂದ್ಯಗಳಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
ಮಹಿಳಾ ಲೀಗ್‌ಗೂ ವೇದಿಕೆ: ಮೊದಲ ಆವೃತ್ತಿಯಲ್ಲಿ ಮಹಿಳಾ ಕಬಡ್ಡಿ ಪ್ರದರ್ಶನ ಪಂದ್ಯಗಳನ್ನೂ ನಡೆಸಲಾಗುತ್ತಿದ್ದು, 4 ತಂಡಗಳು ಭಾಗವಹಿಸಲಿವೆ. ಉದ್ಘಾಟನಾ ದಿನದಂದೇ ಮಹಿಳೆಯರ ಪ್ರದರ್ಶನ ಪಂದ್ಯ ನಡೆಯಲಿದೆ. ಪುರುಷರ ಲೀಗ್ ನಡೆಯುವ ವೇಳೆಯಲ್ಲಿ ಮಹಿಳಾ ಪಂದ್ಯಗಳನ್ನು ನಡೆಸಲಾಗುವುದು ಎಂದು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಹೊನ್ನಪ್ಪಗೌಡ ಹೇಳಿದ್ದಾರೆ.
ಪ್ರಶಸ್ತಿ ಮೊತ್ತ
ವಿಜೇತ ತಂಡಕ್ಕೆ: 1 ಕೋಟಿ 25 ಲಕ್ಷ ರುಪಾಯಿಗಳು
ರನ್ನರ್-ಅಪ್: 75 ಲಕ್ಷ ರುಪಾಯಿಗಳು
3 ಮತ್ತು 4ನೇ ಸ್ಥಾನ: 50 ಲಕ್ಷ ರುಪಾಯಿಗಳು