
ಬೆಂಗಳೂರು[ಜೂ.15]: ಶಿಖರ್ ಧವನ್, ಮುರುಳಿ ವಿಜಯ್ ಆಕರ್ಷಕ ಶತಕ ಹಾಗೂ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಭಾರತ ಮೊದಲ ಇನಿಂಗ್ಸ್’ನಲ್ಲಿ 474 ರನ್ ಬಾರಿಸಿ ಆಲೌಟ್ ಆಗಿದೆ.
ಮೊದಲ ದಿನದಂತ್ಯಕ್ಕೆ 347 ರನ್’ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತ ಎರಡನೇ ದಿನವೂ ಉತ್ತಮ ಬ್ಯಾಟಿಂಗ್ ನಡೆಸಿತು. ಅಶ್ವಿನ್ 18 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮೊದಲನೇ ದಿನದಾಟದಲ್ಲಿ 10 ರನ್ ಬಾರಿಸಿದ್ದ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪಾಂಡ್ಯಗೆ ಮತ್ತೋರ್ವ ಆಲ್ರೌಂಡರ್ ಜಡೇಜಾ ಉತ್ತಮ ಸಾಥ್ ನೀಡಿದರು. 8ನೇ ವಿಕೆಟ್’ಗೆ ಈ ಜೋಡಿ 67 ರನ್’ಗಳ ಜತೆಯಾವಾಡುವ ಮೂಲಕ ತಂಡವನ್ನು 400 ರನ್’ಗಳ ಗಡಿ ದಾಟಿಸಿದರು. ಜಡೇಜಾ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪಾಂಡ್ಯ 94 ಎಸೆತಗಳಲ್ಲಿ 71 ರನ್ ಬಾರಿಸಿ ವಫದಾರ್’ಗೆ ಎರಡನೇ ಬಲಿಯಾದರು. ಇನ್ನು ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಉಮೇಶ್ ಯಾದವ್ 26 ರನ್ ಸಿಡಿಸಿ ಅಜೇಯರಾಗುಳಿದರು. ಇಶಾಂತ್ ಶರ್ಮಾ’ರನ್ನು ಪೆವಿಲಿಯನ್’ಗೆ ಅಟ್ಟಿದ ರಶೀದ್ ಖಾನ್ ಭಾರತದ ಮೊದಲ ಇನಿಂಗ್ಸ್’ಗೆ ತೆರೆ ಎಳೆದರು.
ಆಫ್ಘಾನ್ ಪರ ಯಾಮಿನ್ ಅಹಮದ್ ಜಾಯ್ 3 ವಿಕೆಟ್ ಪಡೆದರೆ, ರಶೀದ್ ಖಾನ್ ಹಾಗೂ ವಫದಾರ್ 2 ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನಿಂಗ್ಸ್: 474/10
ಶಿಖರ್ ಧವನ್: 107
ಅಹಮದ್’ಜಾಯ್: 51/3
[* ವಿವರ ಅಪೂರ್ಣ]
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.