ಕುಸ್ತಿಪಟು ಭಜರಂಗ್‌ಗೆ ಖೇಲ್‌ರತ್ನ ಖಚಿತ

By Kannadaprabha News  |  First Published Aug 17, 2019, 11:12 AM IST

ಭಾರತದ ನಂ.1 ಕುಸ್ತಿಪಟು ಭಜರಂಗ್ ಪೂನಿಯಾಗೆ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್‌ಗಾಂಧಿ ಖೇಲ್‌ರತ್ನ ಗೌರವಕ್ಕೆ ಭಾಜನರಾಗಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ನವದೆಹಲಿ[ಆ.17]: ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್‌ಗಾಂಧಿ ಖೇಲ್‌ರತ್ನಕ್ಕೆ ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಕುಸ್ತಿಪಟು ಭಜರಂಗ್‌ ಪೂನಿಯಾ ಹೆಸರನ್ನು ಶುಕ್ರವಾರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಆಯ್ಕೆ ಸಮಿತಿ ಅಂತಿಮಗೊಳಿಸಿದೆ. 

ಸಂಗೀತಾ ಫೋಗಾಟ್‌ ಜತೆ ಕುಸ್ತಿಪಟು ಭಜರಂಗ್‌ ವಿವಾಹ

Tap to resize

Latest Videos

undefined

ಭಜರಂಗ್‌ ಹೆಸರನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದು, ಸಚಿವಾಲಯದಿಂದ ಅಧಿಕೃತಗೊಳ್ಳುವುದಷ್ಟೇ ಬಾಕಿ ಇದೆ. ಮೇರಿ ಕೋಮ್‌, ಬೈಚುಂಗ್‌ ಭುಟಿಯಾ ಸೇರಿದಂತೆ 12 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ಶನಿವಾರ ಮತ್ತೊಬ್ಬ ಕ್ರೀಡಾಪಟುವನ್ನು ಖೇಲ್‌ ರತ್ನಕ್ಕೆ ಶಿಫಾರಸು ಮಾಡಬಹುದು ಎನ್ನಲಾಗಿದೆ. 

ವಿಶ್ವ ಕುಸ್ತಿ ರ‍್ಯಾಂಕಿಂಗ್‌: ಭಜರಂಗ್ ಮತ್ತೆ ನಂ.1

ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿಗೂ ಆಯ್ಕೆ ಸಮಿತಿ ಹೆಸರುಗಳನ್ನು ಅಂತಿಮಗೊಳಿಸಲಿದ್ದು, ಶನಿವಾರ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಲಿದೆ.
 

click me!