
ಗುವಾಹಟಿ(ಮೇ.22): 6 ಬಾರಿ ವಿಶ್ವ ಚಾಂಪಿಯನ್ ಭಾರತದ ತಾರಾ ಮಹಿಳಾ ಬಾಕ್ಸರ್ ಮೇರಿ ಕೋಮ್, 2ನೇ ಆವೃತ್ತಿಯ ಇಂಡಿಯನ್ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಐವರು ಪುರುಷ ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಂಡಿಯನ್ ಓಪನ್ ಬಾಕ್ಸಿಂಗ್: ಭಾರತಕ್ಕೆ 10 ಪದಕ ಖಚಿತ
2ನೇ ದಿನವಾದ ಮಂಗಳವಾರ ನಡೆದ ಮಹಿಳೆಯರ 51 ಕೆ.ಜಿ. ವಿಭಾಗದಲ್ಲಿ ಮೇರಿ, ನೇಪಾಳದ ಮಾಲಾ ರೈ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದು ಸೆಮೀಸ್‌ಗೇರಿದರು. ಇದರೊಂದಿಗೆ ಸೆಮೀಸ್‌ನಲ್ಲಿ ಮೇರಿ, ಭಾರತದವರೇ ಆದ ನಿಖತ್ ಜರೀನ್ ವಿರುದ್ಧ ಸೆಣಸಲು ಸಜ್ಜಾಗಿದ್ದಾರೆ.
ಮತ್ತೊಂದು ಕ್ವಾರ್ಟರ್‌ನಲ್ಲಿ ನಿಖತ್ ಜರೀನ್, ಭಾರತದವರೇ ಆದ ಅನಾಮಿಕ ವಿರುದ್ಧ 5-0 ಬೌಟ್‌ಗಳಲ್ಲಿ ಗೆಲುವು ಪಡೆದರು. ಉಳಿದಂತೆ ನಿಖತ್ ಜರೀನ್, ಮಂಜು ರಾಣಿ, ಮೋನಿಕಾ, ಮೀನಾ ಕುಮಾರಿ, ಜ್ಯೋತಿ ಗುಲಿಯಾ ಸೆಮೀಸ್‌ಗೇರಿದ್ದಾರೆ. ಪುರುಷರ ವಿಭಾಗದಲ್ಲಿ ಪವನ್ ನರ್ವಾಲ್, ಅಂಕಿತ್, ದಿನೇಶ್, ಆಶೀಶ್ ಹಾಗೂ ಮಂಜಿತ್ ಪಂಗಲ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.