ಅಂಧರ ತಂಡಕ್ಕೆ ಭಾರತ ಫುಟ್ಬಾಲಿಗರಿಂದ 50 ಸಾವಿರ ರುಪಾಯಿ ದಾನ..!

By Web DeskFirst Published Jan 9, 2019, 3:57 PM IST
Highlights

ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.

ಅಬುಧಾಬಿ[ಜ.09]: ಅಭ್ಯಾಸದ ವೇಳೆ ಶಿಸ್ತು ನಿಯಮ ಉಲ್ಲಂಘನೆ ಮಾಡಿದ್ದ ಭಾರತ ಫುಟ್ಬಾಲ್‌ ತಂಡದ ಆಟಗಾರರರಿಂದ ದಂಡವಾಗಿ ಸಂಗ್ರಹಿಸಿದ್ದ 50,000 ಹಣವನ್ನು ಭಾರತೀಯ ಅಂಧರ ಫುಟ್ಬಾಲ್‌ ಫೆಡರೇಷನ್‌(ಐಬಿಎಫ್‌ಎಫ್‌)ಗೆ ನೀಡಲು ತಂಡ ನಿರ್ಧರಿಸಿದೆ. 

ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 4-1 ಜಯ

ಆಟಗಾರರು ಅಭ್ಯಾಸಕ್ಕೆ ತಡವಾಗಿ ಬರುವುದು, ಊಟದ ವೇಳೆ ಮೊಬೈಲ್‌ ತರುವುದು ಮತ್ತು ಅನುಮತಿಯಿಲ್ಲದ ಬಟ್ಟೆಗಳನ್ನು ಧರಿಸುವುದು ಇಂತಹ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ಆಟಗಾರರಿಂದ ಸಣ್ಣ ಪ್ರಮಾಣದಲ್ಲಿ ದಂಡ ಸಂಗ್ರಹಿಸಲಾಗುತ್ತಿತ್ತು. ಈ ರೀತಿಯಲ್ಲಿ ಸಂಗ್ರಹವಾದ ಹಣವನ್ನು ಭಾರತ ಫುಟ್ಬಾಲ್‌ ತಂಡ, ಫುಟ್ಬಾಲ್‌ಗಳನ್ನು ಖರೀದಿಸಲು ಐಬಿಎಫ್‌ಎಫ್‌ಗೆ ದಾನವಾಗಿ ನೀಡಲು ನಿರ್ಧರಿಸಿದೆ.

ಇದೀಗ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.

click me!