
ಕೋಲ್ಕತಾ: ಭಾರತ ಕಲೆ ಸಂಸ್ಕೃತಿಯ ತವರೂರು ಎನ್ನುವುದು ಸಾರ್ವಕಾಲಿಕ ಸತ್ಯ. ಭಾರತ ತನ್ನದೇ ಆದ ಶ್ರೀಮಂತ ಪರಂಪರೆಯನ್ನು ಹೊಂದಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ಕ್ರೀಡಾ ಕ್ಷೇತ್ರದಲ್ಲೂ ಹಲವಾರು ಭಾರತೀಯರು ಜಾಗತಿಕ ಮಟ್ಟದ ಐಕಾನ್‌ಗಳಾಗಿ ಹೊರಹೊಮ್ಮಿದ್ದಾರೆ.
ಇನ್ನು ಜಗತ್ತಿಗೆ ಚದುರಂಗ ಪರಿಚಯಿಸಿದ ಹೆಮ್ಮೆ ಭಾರತದ್ದು. ಇದೀಗ ವಿಶ್ವ ನಂ.1 ಚೆಸ್ ಪಟು ಎನಿಸಿಕೊಂಡಿರುವ ಮ್ಯಾಗ್ನಸ್ ಕಾರ್ಲಸನ್, ಕೋಲ್ಕತಾದಲ್ಲಿ ಚೆಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ಕ್ಷಣ ತಬ್ಬಿಬ್ಬಾದ ಘಟನೆ ನಡೆದಿದೆ. ಹೌದು, 2024ರ ಟಾಟಾ ಸ್ಟೀಲ್ ಚೆಸ್ ಇಂಡಿಯಾ ಫೆಸ್ಟಿವಲ್ ಕಾರ್ಯಕ್ರಮದಲ್ಲಿ, ಆಲ್ ಇಂಡಿಯಾ ವುಮೆನ್ ರಾಪಿಡ್ ಚೆಸ್ ಸ್ಪರ್ಧೆಯಲ್ಲಿ 7/7ಕ್ಕೆ ಅಂಕ ಗಳಿಸುವ ಮೂಲಕ ಭಾರತದ ಬ್ರಿಸ್ಟೀ ಮುಖರ್ಜಿ ಜಯಶಾಲಿಯಾಗಿ ಹೊರಹೊಮ್ಮಿದ್ದರು. ಹೀಗಾಗಿ ನಾರ್ವೆ ಮೂಲದ ಮ್ಯಾಗ್ನಸ್ ಕಾರ್ಲಸನ್ ಅವರು ಬ್ರಿಸ್ಟೀ ಮುಖರ್ಜಿ ಅವರಿಗೆ ಟ್ರೋಫಿ ಹಸ್ತಾಂತರಿಸಲು ವೇದಿಕೆ ಮೇಲಿದ್ದರು. ಆಗ ಚೆಸ್ ದಂತಕಥೆ ಎನಿಸಿರುವ ಮ್ಯಾಗ್ನಸ್ ಕಾರ್ಲಸನ್ ಅವರ ಕೈ ಕುಲುಕಿದ ಬ್ರಿಸ್ಟೀ ಮುಖರ್ಜಿ, ಟ್ರೋಫಿ ಪಡೆಯುವ ಮುನ್ನ ಮ್ಯಾಗ್ನಸ್ ಕಾರ್ಲಸನ್ ಅವರ ಕಾಲಿಗೆ ನಮಸ್ಕರಿಸಿ ಆ ಬಳಿಕ ಟ್ರೋಫಿ ಸ್ವೀಕರಿಸಿದರು.
ಪತ್ನಿ ಜತೆ ಕುಕ್ಕೆ ಸುಬ್ರಮಣ್ಯಕ್ಕೆ ಸೂರ್ಯಕುಮಾರ್ ಯಾದವ್ ಭೇಟಿ; ವಿಶೇಷ ಪೂಜೆ ಸಲ್ಲಿಕೆ
ಇದು ಒಂದು ಕ್ಷಣ ಮ್ಯಾಗ್ನಸ್ ಕಾರ್ಲಸನ್ ಅವರು ಅವಕ್ಕಾಗುವಂತೆ ಮಾಡಿತು. ಆ ಬಳಿಕ ಅವರು ನಗುನಗುತ್ತಲೇ ಫೋಟೋಗೆ ಫೋಸ್ ನೀಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೀಗಿದೆ ನೋಡಿ ವಿಡಿಯೋ:
ಇನ್ನು 20 ವರ್ಷದ ಯುವ ಚೆಸ್ ಆಟಗಾರ್ತಿ ಬ್ರಿಸ್ಟೀ ಮುಖರ್ಜಿ, ಮ್ಯಾಗ್ನಸ್ ಕಾರ್ಲಸನ್ ಅವರಿಂದ ಪ್ರಶಸ್ತಿ ಸ್ವೀಕರಿಸುವ ಮುನ್ನ ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರ ಕಾಲಿಗೆ ನಮಸ್ಕರಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.