ಬಾಲಿವುಡ್‌ಗೆ ವಿರಾಟ್ ಕೊಹ್ಲಿ ಎಂಟ್ರಿ?

Published : Sep 21, 2018, 11:03 AM IST
ಬಾಲಿವುಡ್‌ಗೆ ವಿರಾಟ್ ಕೊಹ್ಲಿ ಎಂಟ್ರಿ?

ಸಾರಾಂಶ

ಸಾಕಷ್ಟು ಜಾಹೀರಾತುಗಳಿಗೆ ಬಣ್ಣ ಹಚ್ಚಿರುವ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ?  ಸದ್ದಿಲ್ಲದೆ ಕೊಹ್ಲಿ ಏನಾದ್ರು ಸಿನಿಮಾ ಮಾಡುತ್ತಿದ್ದಾರಾ? ಎನ್ನುವ ಸುದ್ದಿ ಹಬ್ಬಿದೆ.

ನವದೆಹಲಿ, (ಸೆ.21):  ಈಗಾಗಲೇ ಸಾಕಷ್ಟು ಜಾಹೀರಾತುಗಳಿಗೆ ಬಣ್ಣ ಹಚ್ಚಿರುವ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬಾಲಿವುಡ್‌ಗೆ ಎಂಟ್ರಿ ಕೊಡ್ತಾರಾ ಎನ್ನುವ ಸುದ್ದಿ ಹಬ್ಬಿದೆ. ಇಂತಹದೊಂದು ಸುದ್ದಿಗೆ ಕಾರಣವಾಗಿದ್ದು ವಿರಾಟ್ ಮಾಡಿರುವ ಟ್ವೀಟ್.

ಹೌದು.. ಏಷ್ಯಾಕಪ್‌ನಿಂದ ಹೊರಗುಳಿದು ಫುಲ್ ರೆಸ್ಟ್ ಮೂಡ್‌ನಲ್ಲಿರುವ ವಿರಾಟ್, ಸಿನಿಮಾ ಪೋಸ್ಟರ್‌ವೊಂದರಲ್ಲಿ ಆ್ಯಕ್ಷನ್ ಹೀರೋ ತರ ಫೋಸ್ ಕೊಟ್ಟು ಟ್ವೀಟ್ ಮಾಡಿದ್ದಾರೆ. 10 ವರ್ಷಗಳ ಬಳಿಕ ಎಂಟ್ರಿ ಅಂತ ಟ್ವೀಟ್ ಮಾಡಿದ್ದಾರೆ.

 

ಕೊಹ್ಲಿ ಅವರ ಈ ಟ್ವೀಟ್ ಅಭಿಮಾನಿಗಳಲ್ಲಿ ಹಲವು ಗೊಂದಲಗಳು ಮೂಡಿಸಿವೆ. ಸದ್ದಿಲ್ಲದೆ ವಿರಾಟ್ ಸಿನಿಮಾ ಮಾಡುತ್ತಿದ್ದಾರಾ? ಅಥವಾ ಮಡದಿ ಅನುಷ್ಕಾ ಶರ್ಮಾ ಅವರ ಚಿತ್ರಕ್ಕೆ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರಾ ಎನ್ನುವ ಪ್ರಶ್ನೆಗಳು ಅಭಿಮಾನಿಗಳನ್ನ ಕಾಡುತ್ತಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು
ಸಂಜು ಇನ್, ಗಿಲ್ ಔಟ್: ಮೂರನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಚಾನ್ಸ್?