ಇಂಡೋ-ಪಾಕ್ ಕದನದಲ್ಲಿ ನಿರ್ಮಾಣವಾದ ದಾಖಲೆಗಳೆಷ್ಟು..?

By Web DeskFirst Published Sep 20, 2018, 2:20 PM IST
Highlights

ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ, ಧವನ್ ಸಮಯೋಚಿತ ಬ್ಯಾಟಿಂಗ್ ಟೀಂ ಇಂಡಿಯಾದ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿತು. ಇಂಡೋ-ಪಾಕ್ ನಡುವಿನ ಕದನದಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ನಿಮ್ಮ ಮುಂದೆ...

ಬೆಂಗಳೂರು[ಸೆ.20]: ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಬೌಲರ್’ಗಳ ಸಾಂಘಿಕ ಪ್ರದರ್ಶನದಿಂದ ಪಾಕಿಸ್ತಾನವನ್ನು ಕೇವಲ 162 ರನ್’ಗಳಿಗೆ ನಿಯಂತ್ರಿಸಿದ್ದ ಟೀಂ ಇಂಡಿಯಾ, ಇನ್ನು 21 ಓವರ್ ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ, ಧವನ್ ಸಮಯೋಚಿತ ಬ್ಯಾಟಿಂಗ್ ಟೀಂ ಇಂಡಿಯಾದ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿತು. ಇಂಡೋ-ಪಾಕ್ ನಡುವಿನ ಕದನದಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ನಿಮ್ಮ ಮುಂದೆ...

1. ಇದೇ ಮೊದಲ ಬಾರಿಗೆ ದುಬೈನಲ್ಲಿ ಏಕದಿನ ಕ್ರಿಕೆಟ್’ನಲ್ಲಿ ಪಾಕಿಸ್ತಾನ ತಂಡವು 200 ರನ್’ಗಳೊಳಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿದೆ.

1. ರೋಹಿತ್ ಶರ್ಮಾ ಕೇವಲ 36 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಏಷ್ಯಾಕಪ್’ನಲ್ಲಿ ಅತಿವಾಗಿ ಅರ್ಧಶತಕ ಪೂರೈಸಿದ ಭಾರತೀಯ ನಾಯಕ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

4. ರೋಹಿತ್ ಶರ್ಮಾ ಏಷ್ಯಾಕಪ್’ನಲ್ಲಿ ಪಾಕಿಸ್ತಾನ ವಿರುದ್ಧ 4 ಆರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದುವರೆಗೂ ಮತ್ತೆ ಯಾವ ಬ್ಯಾಟ್ಸ್’ಮನ್ ಕೂಡಾ ಏಷ್ಯಾಕಪ್’ನಲ್ಲಿ ಪಾಕಿಸ್ತಾನ ವಿರುದ್ಧ 4 ಅರ್ಧಶತಕ ಸಿಡಿಸಿದ ಸಾಧನೆ ಮಾಡಿಲ್ಲ.

126- ಪಾಕಿಸ್ತಾನ ವಿರುದ್ಧ ಭಾರತ ಒಟ್ಟು 126 ಎಸೆತಗಳು ಬಾಕಿ ಇರುವಂತೆಯೇ ಭಾರತ ಜಯದ ಸಿಹಿಯುಂಡಿದೆ. ಇದು ಪಾಕಿಸ್ತಾನ ಎದುರು ಬೃಹತ್ ಅಂತರದ ಗೆಲುವಾಗಿದೆ. ಇದಕ್ಕೂ ಮೊದಲು 2006ರಲ್ಲಿ ಮುಲ್ತಾನ್’ನಲ್ಲಿ 105 ಎಸೆತಗಳು ಬಾಕಿಯಿರುವಂತೆ ಗೆಲುವು ಸಾಧಿಸಿತ್ತು. 
 

click me!