ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿ ಇಂದಿಗೆ 3 ವರ್ಷ..!

Published : Nov 13, 2017, 10:25 PM ISTUpdated : Apr 11, 2018, 01:07 PM IST
ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿ ಇಂದಿಗೆ 3 ವರ್ಷ..!

ಸಾರಾಂಶ

ಮುಂಬೈ ಬ್ಯಾಟ್ಸ್'ಮನ್ ರೋಹಿತ್ ಏಕದಿನ ಕ್ರಿಕೆಟ್'ನಲ್ಲಿ ಗರಿಷ್ಠ ವೈಯುಕ್ತಿಕ ರನ್(264) ಸಿಡಿಸಿದ ಆಟಗಾರ ಎನ್ನುವ ದಾಖಲೆ ನಿರ್ಮಿಸಿ ಇಂದಿಗೆ 3 ವರ್ಷ.

ನವದೆಹಲಿ(ನ.13): ಏಕದಿನ ಕ್ರಿಕೆಟ್'ನಲ್ಲಿ ಎರಡು ಬಾರಿ ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್'ಮನ್ ಎನ್ನುವ ಕೀರ್ತಿಗೆ ಭಾಜನರಾಗಿರುವ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿ ಇಂದಿಗೆ ಮೂರು ವರ್ಷವಾಯ್ತು.

ಹೌದು ಮುಂಬೈ ಬ್ಯಾಟ್ಸ್'ಮನ್ ರೋಹಿತ್ ಏಕದಿನ ಕ್ರಿಕೆಟ್'ನಲ್ಲಿ ಗರಿಷ್ಠ ವೈಯುಕ್ತಿಕ ರನ್(264) ಸಿಡಿಸಿದ ಆಟಗಾರ ಎನ್ನುವ ದಾಖಲೆ ನಿರ್ಮಿಸಿ ಇಂದಿಗೆ 3 ವರ್ಷ.

2014ರಲ್ಲಿ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ 173 ಎಸೆತಗಳಲ್ಲಿ 264 ರನ್ ಸಿಡಿಸಿದ್ದರು. ಅವರ ಸ್ಫೋಟಕ ಇನಿಂಗ್ಸ್'ನಲ್ಲಿ 33 ಬೌಂಡರಿ ಹಾಗು 9 ಆಕರ್ಷಕ ಸಿಕ್ಸರ್'ಗಳು ಸೇರಿದ್ದವು. ರೋಹಿತ್ ಶರ್ಮಾ ಇದುವರೆಗೆ ಏಕದಿನ ಕ್ರಿಕೆಟ್'ನಲ್ಲಿ 15 ಶತಕ ಸಿಡಿಸಿದ್ದಾರೆ.

ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 6 ವಿಕೆಟ್ ನಷ್ಟಕ್ಕೆ 404 ರನ್ ಕಲೆ ಹಾಕಿತ್ತು.

ಇದಕ್ಕೂ ಮೊದಲು ರೋಹಿತ್ ಶರ್ಮಾ 2012ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 209 ರನ್ ಸಿಡಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್'ನಲ್ಲಿ ದ್ವಿಶತಕ ಸಿಡಿಸಿದ ಮೂರನೇ ಕ್ರಿಕೆಟಿಗ ಎನ್ನುವ ಖ್ಯಾತಿಗೆ ರೋಹಿತ್ ಭಾಜನರಾಗಿದ್ದರು. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್(200*) ಹಾಗೂ ವಿರೇಂದ್ರ ಸೆಹ್ವಾಗ್(219) ರನ್ ಬಾರಿಸಿದ್ದರು.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎರಡು ಮ್ಯಾಚ್ ಬಾಕಿ ಇರುವಂತೆಯೇ ಆ್ಯಶಸ್ ಕಿರೀಟ ಗೆದ್ದ ಆಸ್ಟ್ರೇಲಿಯಾ! ಇಂಗ್ಲೆಂಡ್‌ಗೆ ರೋಚಕ ಸೋಲು
ಅಂಡರ್-19 ಏಷ್ಯಾಕಪ್‌: ಫೈನಲ್‌ನಲ್ಲಿ ಮತ್ತೆ ಪಾಕ್ ಬಗ್ಗುಬಡಿಯಲು ಭಾರತ ಯುವ ಪಡೆ ರೆಡಿ!