ಟೀಂ ಇಂಡಿಯಾ ಕ್ರಿಕೆಟಿಗರಿಗಿದು ಗುಡ್ ನ್ಯೂಸ್..!

Published : Sep 23, 2019, 01:47 PM IST
ಟೀಂ ಇಂಡಿಯಾ ಕ್ರಿಕೆಟಿಗರಿಗಿದು ಗುಡ್ ನ್ಯೂಸ್..!

ಸಾರಾಂಶ

ಇತ್ತೀಚಿನ ದಿನಗಳಲ್ಲಿ ವಿದೇಶಿ ನೆಲದಲ್ಲೂ ಭರ್ಜರಿ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ ಸಿಹಿ ಸುದ್ದಿಯೊಂದನ್ನು ನೀಡಿದೆ. ಇತ್ತೀಚೆಗಷ್ಟೇ ವಿಂಡೀಸ್ ಸರಣಿಯಲ್ಲಿ ಒಂದು ಸೋಲು ಕಾಣದೇ ತವರಿಗೆ ಮರಳಿದ್ದ ವಿರಾಟ್ ಪಡೆಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಅಷ್ಟಕ್ಕೂ ಏನಿದು ಸ್ಟೋರಿ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್...

ನವದೆಹಲಿ[ಸೆ.23]: ವಿದೇಶಿ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಸಿಹಿ ಸುದ್ದಿಯೊಂದನ್ನು ಕ್ರಿಕೆಟ್ ಆಡಳಿತ ಸಮಿತಿ[CoA] ನೀಡಿದ್ದು, ಭಾರತ ಕ್ರಿಕೆಟ್‌ ತಂಡದ ವಿದೇಶ ಪ್ರವಾಸಗಳ ವೇಳೆ ಆಟ​ಗಾ​ರರ ದಿನ​ಭತ್ಯೆಯನ್ನು ಬಿಸಿ​ಸಿಐ ಡಬಲ್ ಮಾಡಿದೆ.

ನವೆಂಬರ್‌ವರೆಗೆ ಧೋನಿಗೆ ವಿಶ್ರಾಂತಿ; ಬಾಂಗ್ಲಾ ಸರಣಿಗೂ ಅಲಭ್ಯ?

ಸದ್ಯ ಪ್ರತಿ ದಿನ 125 ಡಾಲರ್‌ (8,900 ರು.) ಪಡೆ​ಯು​ತ್ತಿ​ರುವ ಆಟ​ಗಾ​ರರು, ಮುಂದಿನ ವಿದೇಶಿ ಪ್ರವಾಸಗಳಿಂದ 250 ಡಾಲರ್‌ (17,800 ರು.) ಗಳಿಸ​ಲಿ​ದ್ದಾರೆ. ಆದರೆ ಭಾರತದಲ್ಲಿ ಪಡೆಯುತ್ತಿದ ದಿನಭತ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಪ್ರಕಟಿಸಿದ ಆಫ್ರಿದಿ; ನಾಲ್ವರಲ್ಲಿ ಒರ್ವ ಭಾರತೀಯನಿಗೆ ಸ್ಥಾನ !

ಭಾರತ ತಂಡವು ಕಳೆದ ವರ್ಷಾಂತ್ಯದ ವೇಳೆಗೆ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಇನ್ನು ಕಳೆದ ತಿಂಗಳು ನಡೆದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್’ನಲ್ಲಿ 2-0 ಅಂತರದಲ್ಲಿ ಜಯಿಸಿತ್ತು. ಭಾರತ ತಂಡವು 2020ರ ವರ್ಷಾರಂಭದ ವೇಳೆಗೆ ನ್ಯೂಜಿಲೆಂಡ್ ಪ್ರವಾಸ್ ಕೈಗೊಳ್ಳಲಿದ್ದು, ಆಗ ನೂತನ ವಿದೇಶಿ ಭತ್ಯೆ ಪಡೆಯಲಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!
2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!