
ಲಂಡನ್(ಮೇ.26): ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 2020ರಲ್ಲಿ ಆರಂಭಿಸಲಿರುವ 100 ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ತಾರಾ ಆಟಗಾರರಾದ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಸೇರಿ ಇನ್ನಿತರರು ಭಾಗವಹಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಕ್ರಿಕೆಟ್ ಆಟವನ್ನು ಮತ್ತಷ್ಟು ರೋಚಕಗೊಳಿಸುವ ಸಲುವಾಗಿ 120 ಎಸೆತ (ಟಿ20) ಬದಲಿಗೆ ತಲಾ 100 ಎಸೆತಗಳ ಇನ್ನಿಂಗ್ಸ್‌ನ ಪಂದ್ಯವನ್ನು ನಡೆಸಲು ಇಸಿಬಿ ನಿರ್ಧರಿಸಿದೆ. ವಿದೇಶಿ ಲೀಗ್‌ಗಳಲ್ಲಿ ಭಾರತೀಯರನ್ನು ಆಡಲು ಬಿಡದ ಬಿಸಿಸಿಐ, ಮುಂದಿನ ದಿನಗಳಲ್ಲಿ ಲಂಡನ್‌ನಲ್ಲೂ ಐಪಿಎಲ್ ಮಾರುಕಟ್ಟೆ ವಿಸ್ತರಿಸುವ ಲೆಕ್ಕಾಚಾರದೊಂದಿಗೆ, ಈ ಲೀಗ್‌ಗೆ ತನ್ನ ಆಟಗಾರರನ್ನು ಕಳುಹಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಈಗಾಗಲೇ ಟಿ20 ಕ್ರಿಕೆಟ್ ಜನಪ್ರಿಯಗೊಂಡಿದ್ದು, 100 ಬಾಲ್’ಗಳ ಕ್ರಿಕೆಟ್ ಕೂಡಾ ಅದೇ ರೀತಿ ಜನಪ್ರಿಯಗೊಳ್ಳುತ್ತಾ ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.