IPL 2018: ಕೆಕೆಆರ್ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟ ಸನ್’ರೈಸರ್ಸ್

Published : May 25, 2018, 11:10 PM IST
IPL 2018: ಕೆಕೆಆರ್ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟ ಸನ್’ರೈಸರ್ಸ್

ಸಾರಾಂಶ

ಮತ್ತೊಮ್ಮೆ ಬೌಲಿಂಗ್’ನಲ್ಲಿ ಮಿಂಚಿದ ಸನ್’ರೈಸರ್ಸ್ 11ನೇ ಆವೃತ್ತಿಯಲ್ಲಿ ಕೋಲ್ಕತಾ ನೈಟ್’ರೈಡರ್ಸ್ ಪಡೆಯನ್ನು 13 ರನ್’ಗಳಿಂದ ಮಣಿಸಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಇದೀಗ ಮುಂಬೈನ ವಾಂಖೇಡೆ ಮೈದಾನದಲ್ಲಿ ಮೇ 27ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಿಎಸ್’ಕೆ ತಂಡದ ಎದುರು ಕೇನ್ ವಿಲಿಯಮ್ಸನ್ ಪಡೆ ಪ್ರಶಸ್ತಿಗಾಗಿ ಕಾದಾಡಲಿದೆ.

ಕೋಲ್ಕತಾ[ಮೇ.25]: ಮತ್ತೊಮ್ಮೆ ಬೌಲಿಂಗ್’ನಲ್ಲಿ ಮಿಂಚಿದ ಸನ್’ರೈಸರ್ಸ್ 11ನೇ ಆವೃತ್ತಿಯಲ್ಲಿ ಕೋಲ್ಕತಾ ನೈಟ್’ರೈಡರ್ಸ್ ಪಡೆಯನ್ನು 13 ರನ್’ಗಳಿಂದ ಮಣಿಸಿ ಫೈನಲ್’ಗೆ ಲಗ್ಗೆಯಿಟ್ಟಿದೆ. ಇದೀಗ ಮುಂಬೈನ ವಾಂಖೇಡೆ ಮೈದಾನದಲ್ಲಿ ಮೇ 27ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಿಎಸ್’ಕೆ ತಂಡದ ಎದುರು ಕೇನ್ ವಿಲಿಯಮ್ಸನ್ ಪಡೆ ಪ್ರಶಸ್ತಿಗಾಗಿ ಕಾದಾಡಲಿದೆ.
ಸನ್’ರೈಸರ್ಸ್ ಹೈದರಾಬಾದ್ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಕೆಕೆಆರ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಲಿನ್-ನರೈನ್ ಜೋಡಿ 40 ರನ್ ಕಲೆ ಹಾಕಿತು. ನರೈನ್ 13 ಎಸೆತಗಳಲ್ಲಿ 26 ರನ್ ಬಾರಿಸಿದರು. ನಿತಿಶ್ ರಾಣಾ ಕೂಡಾ 22 ರನ್ ಬಾರಿಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಮತ್ತೋರ್ವ ಆರಂಭಿಕ ಆಟಗಾರ ಲಿನ್ 48 ರನ್ ಬಾರಿಸಿ ರಶೀದ್ ಖಾನ್’ಗೆ ವಿಕೆಟ್ ಒಪ್ಪಿಸಿದರು.
ದಿಢೀರ್ ಕುಸಿದ ಕೆಕೆಆರ್: ಸನ್’ರೈಸರ್ಸ್ ಬಲಿಷ್ಠ ಬೌಲಿಂಗ್ ದಾಳಿಗೆ ಕೆಕೆಆರ್ ಶರಣಾಯಿತು. ಒಂದು ಹಂತದಲ್ಲಿ 87 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡು ಜಯದತ್ತ ಮುನ್ನುಗ್ಗುತ್ತಿದ್ದ ಕೆಕೆಆರ್’ಗೆ ರಶೀದ್ ಖಾನ್ ಮತ್ತೊಮ್ಮೆ ಶಾಕ್ ನೀಡಿದರು. ಉತ್ತಪ್ಪ[2], ಆ್ಯಂಡ್ರೆ ರಸೆಲ್[3] ಹಾಗೂ ಲಿನ್ [48] ಬಲಿ ಪಡೆಯುವ ಮೂಲಕ ಕೆಕೆಆರ್ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕೌಲ್ ಹಾಗೂ ಬ್ರಾಥ್’ವೈಟ್ ತಲಾ 2 ವಿಕೆಟ್ ಪಡೆದರು. ಕೊನೆಯಲ್ಲಿ ಶುಭ್’ಮನ್ ಗಿಲ್ 30 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಕೆಆರ್ 161 ರನ್ ಗಳಿಸಲಷ್ಟೇ ಶಕ್ತವಾಯಿತು. 
ಇದಕ್ಕೂ ಮೊದಲು ರಶೀದ್ ಖಾನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್’ರೈಸರ್ಸ್ 174 ರನ್ ಕಲೆ ಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
SRH: 174/7
ವೃದ್ದಿಮಾನ್ ಸಾಹ: 35
ಕುಲ್ದೀಪ್: 29/2
KKR: 161/9
ಲಿನ್: 48
ರಶೀದ್ ಖಾನ್: 19/3

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!