ಮುಂದಿನ ಏಷ್ಯಾಡ್‌ನಲ್ಲಿ ಭಾರತ ಮತ್ತಷ್ಟು ಪದಕ ಬೇಟೆ: ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ

Published : Oct 11, 2023, 11:59 AM IST
ಮುಂದಿನ ಏಷ್ಯಾಡ್‌ನಲ್ಲಿ ಭಾರತ ಮತ್ತಷ್ಟು ಪದಕ ಬೇಟೆ: ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ

ಸಾರಾಂಶ

‘ಈ ಬಾರಿ ನಾವು 100 ಪದಕ ದಾಟಿದ್ದೇವೆ. ಇದು ಇಲ್ಲಿಗೆ ನಿಲ್ಲಬಾರದು. ಸರ್ಕಾರ ಕ್ರೀಡಾಪಟುಗಳಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಿದೆ. ನೀವೆಲ್ಲಾ ಪ್ಯಾರಿಸ್‌ ಒಲಿಂಪಿಕ್ಸ್‌ನತ್ತ ಗಮನ ಹರಿಸಿ ಅಲ್ಲಿಯೂ ಸಾಧನೆ ಮಾಡಲು ಸಿದ್ಧರಾಗಿ’ ಎಂದು ಕರೆ ನೀಡಿದರು.

ನವದೆಹಲಿ(ಅ.11): ಹಾಂಗ್‌ಝೋ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತೀಯರನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯರು ಈ ಸಲಕ್ಕಿಂತ ಹೆಚ್ಚು ಪದಕ ಗೆಲ್ಲಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಇಲ್ಲಿನ ತಮ್ಮ ನಿವಾಸದಲ್ಲಿ ಏಷ್ಯಾಡ್‌ನಲ್ಲಿ ಪಾಲ್ಗೊಂಡ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದ ಮೋದಿ, ಪದಕ ವಿಜೇತರನ್ನು ಅಭಿನಂದಿಸಿದರು.

‘ಈ ಬಾರಿ ನಾವು 100 ಪದಕ ದಾಟಿದ್ದೇವೆ. ಇದು ಇಲ್ಲಿಗೆ ನಿಲ್ಲಬಾರದು. ಸರ್ಕಾರ ಕ್ರೀಡಾಪಟುಗಳಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಿದೆ. ನೀವೆಲ್ಲಾ ಪ್ಯಾರಿಸ್‌ ಒಲಿಂಪಿಕ್ಸ್‌ನತ್ತ ಗಮನ ಹರಿಸಿ ಅಲ್ಲಿಯೂ ಸಾಧನೆ ಮಾಡಲು ಸಿದ್ಧರಾಗಿ’ ಎಂದು ಕರೆ ನೀಡಿದರು.

PKL Auction: ಬೆಂಗಳೂರು ಬುಲ್ಸ್ ತಂಡಕ್ಕೆ ಸುರ್ಜೀತ್, ಅಭಿಷೇಕ್ ಸಿಂಗ್

‘ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡವರ ಪೈಕಿ 125 ಮಂದಿ ಖೇಲೋ ಇಂಡಿಯಾದಿಂದ ಗುರುತಿಸಲ್ಪಟ್ಟವರು. ಖೇಲೋ ಇಂಡಿಯಾ ಪ್ರತಿಭೆಗಳು 40 ಪದಕಗಳನ್ನೂ ಗೆದ್ದರು ಎನ್ನುವುದು ಕೇಳಿ ಬಹಳ ಸಂತೋಷವಾಗಿದೆ. ಕ್ರೀಡಾಪಟುಗಳಿಗೆ ಕೇಂದ್ರವು ಒಟ್ಟು 25000 ಕೋಟಿ ರು. ನೆರವು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ 3000 ಕೋಟಿ ರು. ಅನುದಾನವನ್ನೂ ನೀಡಲಿದ್ದೇವೆ. ಹಣಕಾಸು ನೆರವಿನ ಬಗ್ಗೆ ಚಿಂತಿಸದೆ ನಿಮ್ಮ ಗುರಿಯತ್ತ ಮುನ್ನುಗ್ಗಿ’ ಎಂದು ಮೋದಿ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.

ಭಾರತದ ಪಾಲಿಗೆ ಅವಿಸ್ಮರಣೀಯ ಏಷ್ಯಾಡ್‌!

19ನೇ ಆವೃತ್ತಿ ಏಷ್ಯಾಡ್‌ ಭಾರತದ ಪಾಲಿಗೆ ಅವಿಸ್ಮರಣೀಯ. ನಿರೀಕ್ಷೆಯಂತೆಯೇ ಭಾರತ ಪದಕ ಗಳಿಕೆಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿದ್ದು, 28 ಚಿನ್ನ ಸೇರಿ 107 ಪದಕಗಳೊಂದಿಗೆ ತವರಿಗೆ ಹಿಂದಿರುಗಿದೆ. ಭಾರತೀಯ ಅಥ್ಲೀಟ್‌ಗಳು ಈ ಬಾರಿ ಕೆಲ ವಿಭಾಗಗಳಲ್ಲಿ ಅನಿರೀಕ್ಷಿತ ಸಾಧನೆ ಮಾಡಿದರೆ, ಕೆಲ ಸ್ಪರ್ಧೆಗಳಲ್ಲಿ ಚೊಚ್ಚಲ ಪದಕ ತಂದುಕೊಟ್ಟಿದ್ದಾರೆ. ಕೆಲ ಕ್ರೀಡೆಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನವನ್ನೂ ದಾಖಲಿಸಿದೆ. ಹಲವು ಸ್ಪರ್ಧಿಗಳು ಭಾರತದ ಕೆಲ ದಶಕಗಳ ಪದಕ ಬರವನ್ನೂ ನೀಗಿಸಿದರು.

Exclusive: ಪತ್ನಿ ಜೀವನದಲ್ಲಿ ಬಂದ ಬಳಿಕವೇ ಅದೃಷ್ಟ ಬದಲಾಗಿದೆ ಎಂದ ಪದಕ ವಿಜೇತ ಪ್ರಣಯ್‌!

ಹಲವು ‘ಮೊದಲ ಚಿನ್ನ’

ಭಾರತೀಯರು ಈ ಸಲ ಚಿನ್ನದ ಗಳಿಕೆಯಲ್ಲಿ ಹಿಂದೆ ಬೀಳಿಲಿಲ್ಲ. ನಿರೀಕ್ಷೆ ಇಟ್ಟಿದ್ದ ಸ್ಪರ್ಧೆಗಳ ಜೊತೆಗೆ ಇನ್ನಿತರ ಕೆಲ ಸ್ಪರ್ಧೆಗಳಲ್ಲೂ ಮೊದಲ ಬಾರಿ ಚಿನ್ನದ ಸಾಧನೆ ಮಾಡಿತು. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಏಷ್ಯಾಡ್‌ನಲ್ಲೇ ಭಾರತಕ್ಕೆ ಬ್ಯಾಡ್ಮಿಂಟನ್‌ನ ಮೊದಲ ಚಿನ್ನ ತಂದುಕೊಟ್ಟರು. ಕ್ರಿಕೆಟ್‌ನಲ್ಲಿ ಪುರುಷ, ಮಹಿಳಾ ತಂಡಗಳೂ ಚೊಚ್ಚಲ ಚಾಂಪಿಯನ್‌ ಎನಿಸಿಕೊಂಡಿತು. ಅಥ್ಲೆಟಿಕ್ಸ್‌ನ ಪುರುಷರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ ಸಾಬ್ಳೆ, ಮಹಿಳೆಯರ 5000 ಮೀಟರ್‌ನಲ್ಲಿ ಪಾರುಲ್‌, ಮಹಿಳೆಯರ ಜಾವೆಲಿನ್‌ನಲ್ಲಿ ಅನ್ನು ರಾಣಿ ಚಿನ್ನ ಗೆದ್ದು, ಈ ಸಾಧನೆ ಮಾಡಿದ ಮೊದಲಿಗರು ಎನಿಸಿಕೊಂಡರು. ಇನ್ನು, ಮಹಿಳೆಯರ ಗಾಲ್ಫ್‌, ಸೆಪಕ್‌ಟಕ್ರಾನಲ್ಲೂ ದೇಶಕ್ಕೆ ಮೊದಲ ಪದಕ ಲಭಿಸಿತು.

ವಿಶ್ವ ನಂ.1 ಪಟ್ಟಕ್ಕೇರಿದ ಸಾತ್ವಿಕ್‌-ಚಿರಾಗ್‌ ಶೆಟ್ಟಿ

ನವದೆಹಲಿ: ಭಾರತದ ತಾರಾ ಶಟ್ಲರ್‌ಗಳಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಬ್ಯಾಡ್ಮಿಂಟನ್‌ ವಿಶ್ವ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಅಧಿಕೃತವಾಗಿ ಅಗ್ರಸ್ಥಾನಕ್ಕೇರಿದ್ದಾರೆ. ಕಳೆದ ವಾರ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸಾತ್ವಿಕ್‌-ಚಿರಾಗ್‌ ನಂ.1 ಸ್ಥಾನಕ್ಕೇರುವುದು ಖಚಿತವಾಗಿತ್ತು. ಇವರಿಬ್ಬರು 2 ಸ್ಥಾನ ಮೇಲೇರಿ ಮೊದಲ ಬಾರಿಗೆ ನಂ.1 ಪಟ್ಟ ಅಲಂಕರಿಸಿದ್ದಾರೆ. ಡಬಲ್ಸ್‌ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಮೊದಲ ಜೋಡಿ ಎನ್ನುವ ದಾಖಲೆಗೆ ಸಾತ್ವಿಕ್‌-ಚಿರಾಗ್‌ ಪಾತ್ರರಾಗಿದ್ದಾರೆ. ಈ ಮೊದಲು ಸಿಂಗಲ್ಸ್‌ನಲ್ಲಿ ಪ್ರಕಾಶ್‌ ಪಡುಕೋಣೆ, ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ನಂ.1 ಸ್ಥಾನ ಪಡೆದಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್‌ ಹಜಾರೆ ಟ್ರೋಫಿ ದಾಖಲೆ, ಜಾರ್ಖಂಡ್‌ ವಿರುದ್ಧ 413 ರನ್‌ ಬೆನ್ನಟ್ಟಿ ಗೆದ್ದ ಕರ್ನಾಟಕ!
ವಿಜಯ್ ಹಜಾರೆ ಟ್ರೋಫಿ ಕಮ್‌ಬ್ಯಾಕ್‌ ಪಂದ್ಯದಲ್ಲಿ ಶತಕ ಚಚ್ಚಿದ ಕಿಂಗ್ ಕೊಹ್ಲಿ! ವಿರಾಟ್‌ಗಿದು ಕಳೆದ 4 ಪಂದ್ಯಗಳಲ್ಲಿ 3ನೇ ಶತಕ