PKL Auction: ಬೆಂಗಳೂರು ಬುಲ್ಸ್ ತಂಡಕ್ಕೆ ಸುರ್ಜೀತ್, ಅಭಿಷೇಕ್ ಸಿಂಗ್

Published : Oct 11, 2023, 11:24 AM IST
PKL Auction: ಬೆಂಗಳೂರು ಬುಲ್ಸ್ ತಂಡಕ್ಕೆ ಸುರ್ಜೀತ್, ಅಭಿಷೇಕ್ ಸಿಂಗ್

ಸಾರಾಂಶ

ಮೊದಲ ದಿನ ಇಬ್ಬರು ಆಟಗಾರರನ್ನು ಖರೀದಿಸಿದ್ದ ಬೆಂಗಳೂರು ಬುಲ್ಸ್‌ 2ನೇ ದಿನ 14 ಮಂದಿಯನ್ನು ಖರೀದಿಸಿತು. ಪ್ರಮುಖವಾಗಿ ತಾರಾ ರೈಡರ್‌ ಅಭಿಷೇಕ್ ಸಿಂಗ್‌ ಕೇವಲ 14 ಲಕ್ಷ ರು.ಗೆ ಬುಲ್ಸ್‌ ಪಾಲಾದರೆ, ಅನುಭವಿ ಡಿಫೆಂಡರ್‌ಗಳಾದ ಸುರ್ಜೀತ್‌ ಸಿಂಗ್‌ ಹಾಗೂ ರಣ್‌ ಸಿಂಗ್‌ ಕ್ರಮವಾಗಿ 14.20 ಲಕ್ಷ ಹಾಗೂ 13 ಲಕ್ಷಕ್ಕೆ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡರು.  

ಮುಂಬೈ(ಅ.11): ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 12 ತಂಡಗಳು ಸೇರಿ ಒಟ್ಟು 118 ಆಟಗಾರರನ್ನು ಖರೀದಿಸಿದವು. 2ನೇ ದಿನವಾದ ಮಂಗಳವಾರ ಇರಾನ್‌ನ ಆಟಗಾರರಿಗೆ ಹೆಚ್ಚಿನ ಬೇಡಿಕೆ ಕಂಡುಬಂತು. ಇನ್ನು ಬೆಂಗಳೂರು ಬುಲ್ಸ್‌ ಕೆಲ ಪ್ರಮುಖ ಆಟಗಾರರನ್ನು ಕಡಿಮೆ ಮೊತ್ತಕ್ಕೆ ಖರೀದಿಸಿ ಅಚ್ಚರಿ ಮೂಡಿಸಿತು. ಇರಾನ್‌ನ ಯುವ ರೈಡರ್‌ ಅಮೀರ್‌ ಜಫರ್ದಾನೇಶ್‌ ಅವರನ್ನು ಯು ಮುಂಬಾ 68 ಲಕ್ಷ ರು.ಗೆ ಖರೀದಿಸಿತು. ಅಮೀರ್‌ ಹೊಸೈನ್‌ ಬಸ್ತಾಮಿ 30 ಲಕ್ಷ ರು.ಗೆ ತಮಿಳ್‌ ತಲೈವಾಸ್‌ ಪಾಲಾದರು.

ಮೊದಲ ದಿನ ಇಬ್ಬರು ಆಟಗಾರರನ್ನು ಖರೀದಿಸಿದ್ದ ಬೆಂಗಳೂರು ಬುಲ್ಸ್‌ 2ನೇ ದಿನ 14 ಮಂದಿಯನ್ನು ಖರೀದಿಸಿತು. ಪ್ರಮುಖವಾಗಿ ತಾರಾ ರೈಡರ್‌ ಅಭಿಷೇಕ್ ಸಿಂಗ್‌ ಕೇವಲ 14 ಲಕ್ಷ ರು.ಗೆ ಬುಲ್ಸ್‌ ಪಾಲಾದರೆ, ಅನುಭವಿ ಡಿಫೆಂಡರ್‌ಗಳಾದ ಸುರ್ಜೀತ್‌ ಸಿಂಗ್‌ ಹಾಗೂ ರಣ್‌ ಸಿಂಗ್‌ ಕ್ರಮವಾಗಿ 14.20 ಲಕ್ಷ ಹಾಗೂ 13 ಲಕ್ಷಕ್ಕೆ ಬೆಂಗಳೂರು ತಂಡಕ್ಕೆ ಸೇರ್ಪಡೆಗೊಂಡರು.

ICC World Cup 2023 ಲಂಕಾ ಎದುರು ದಾಖಲೆ ರನ್ ಚೇಸ್‌ ಮಾಡಿ ಗೆದ್ದ ಪಾಕಿಸ್ತಾನ..!

ಮೊದಲ ದಿನ ಪವನ್‌ ಶೆರಾವತ್‌ 2.65 ಕೋಟಿ ರು.ಗೆ ತೆಲುಗು ಟೈಟಾನ್ಸ್‌ ತಂಡಕ್ಕೆ ಸೇರ್ಪಡೆಗೊಳ್ಳುವ ಮೂಲಕ ಪ್ರೊ ಕಬಡ್ಡಿಯ ಅತ್ಯಂತ ದುಬಾರಿ ಆಟಗಾರನ ಪಟ್ಟ ಉಳಿಸಿಕೊಂಡಿದ್ದರು. ಇರಾನ್‌ನ ಮೊಹಮದ್‌ರೆಜಾ ಶಾದ್ಲೂ 2.35 ಕೋಟಿ ರು.ಗೆ ಬಿಕರಿಯಾಗಿ ಲೀಗ್‌ನ 2ನೇ ಅತಿ ದುಬಾರಿ ಆಟಗಾರ ಎನಿಸಿದ್ದರು. 

ತಮ್ಮ ಬಲಿಷ್ಠ ಡಿಫೆನ್ಸ್‌ ಹಾಗೂ ಮಿಂಚಿನಂತೆ ಎದುರಾಳಿ ಅಂಕಣಕ್ಕೆ ನುಗ್ಗಿ ರೈಡ್‌ ಮಾಡುವ ಚಾಕಚಕ್ಯತೆಯಿಂದ ಗಮನ ಸೆಳೆದಿರುವ ಇರಾನ್‌ನ ಮೊಹಮದ್‌ರೆಜಾ ಶಾದ್ಲೂ ಪ್ರೊ ಕಬಡ್ಡಿ ಇತಿಹಾಸದಲ್ಲೇ ಎರಡನೇ ಗರಿಷ್ಠ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಸೋಮವಾರ 10ನೇ ಆವೃತ್ತಿ ಪ್ರೊ ಕಬಡ್ಡಿ ಆಟಗಾರರ ಹರಾಜಿನಲ್ಲಿ ಶಾದ್ಲೂ ಪುಣೇರಿ ಪಲ್ಟನ್‌ಗೆ ಬರೋಬ್ಬರಿ ₹2.35 ಕೋಟಿಗೆ ಹರಾಜಾದರು. 

Pro kabaddi League ದಾಖಲೆ ಮೊತ್ತಕ್ಕೆ ಹರಾಜಾದ ಮನಿಂದರ್ ಸಿಂಗ್, ಮೊಹಮ್ಮದ್‌ರೆಜಾ!

ಮತ್ತೊಂದೆಡೆ ಭಾರತದ ತಾರಾ ಆಟಗಾರ ಮಣೀಂದರ್‌ ಸಿಂಗ್‌ 2.12 ಕೋಟಿ ರು. ಜಾಕ್‌ಪಾಟ್‌ ಹೊಡೆದರು. ಪ್ರೊ ಕಬಡ್ಡಿ ಹರಾಜಿನಲ್ಲಿ 2 ಕೋಟಿ ರು. ದಾಟಿದ 3ನೇ ಆಟಗಾರ ಎನಿಸಿಕೊಂಡ ಮಣೀಂದರ್‌ರನ್ನು ಗುಜರಾತ್‌ ಜೈಂಟ್ಸ್‌ ಖರೀದಿಸಿತು. ಆದರೆ ಬೆಂಗಾಲ್‌ ವಾರಿಯರ್ಸ್‌ ಫೈನಲ್‌ ಬಿಡ್‌ ಮ್ಯಾಚ್‌(ಎಫ್‌ಬಿಎಂ) ಕಾರ್ಡ್‌ ಬಳಸಿ ಮಣೀಂದರ್‌ರನ್ನು ತನ್ನಲ್ಲೇ ಉಳಿಸಿಕೊಂಡಿತು.

ತಾರಾ ಡಿಫೆಂಡರ್‌, ಇರಾನ್‌ನ ಫಜಲ್‌ ಅಟ್ರಾಚೆಲಿ 1.60 ಕೋಟಿ ರು.ಗೆ ಗುಜರಾತ್‌ ಪಾಲಾದರೆ, ಮಂಜೀತ್‌ ದಹಿಯಾರನ್ನು ಪಾಟ್ನಾ ಪೈರೇಟ್ಸ್‌ ₹92 ಲಕ್ಷ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿತು. ವಿಜಯ್‌ ಮಲಿಕ್‌ ಯು.ಪಿ.ಯೋಧಾಸ್‌ಗೆ ₹85 ಲಕ್ಷಕ್ಕೆ, ಮೊಹಮದ್ ನಬೀಬಕ್ಷ್‌ ಗುಜರಾತ್‌ಗೆ ₹22 ಲಕ್ಷಕ್ಕೆ ಬಿಕರಿಯಾದರು. ಕಳೆದ ಆವೃತ್ತಿಗಳಲ್ಲಿ ಬೆಂಗ್ಳೂರು ಬುಲ್ಸ್‌ನಲ್ಲಿದ್ದ ಮಹೇಂದರ್‌ ಸಿಂಗ್‌ ₹40.25ಕ್ಕೆ ಯು ಮುಂಬಾ ಪಾಲಾದರು.

ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಡಿ.2ರಿಂದ 10ನೇ ಆವೃತ್ತಿ ಆರಂಭಗೊಳ್ಳಲಿದೆ

ಬೆಂಗಳೂರು ಬುಲ್ಸ್‌ ಸಂಪೂರ್ಣ ತಂಡ ಹೀಗಿದೆ ನೋಡಿ:

ನೀರಜ್ ನರ್ವಾಲ್, ಭರತ್, ಸೌರಭ್ ನಂದಲ್, ಯಶ್ ಹೂಡಾ, ಅಮನ್, ಲಿಟನ್ ಅಲಿ, ಸಚಿನ್ ನರ್ವಾಲ್, ವಿಶಾಲ್, ಮೋನು, ಪೊನ್‌ಪಾರ್ಥಿಬನ್ ಸುಬ್ರಮಣಿಯನ್, ಸುರ್ಜಿತ್ ಸಿಂಗ್, ಅಭಿಷೇಕ್ ಸಿಂಗ್, ರಣ್ ಸಿಂಗ್, ಬಂಟಿ, ಸುಂದರ್, ಸುಶಿಲ್, ರಕ್ಷಿತ್, ರೋಹಿತ್ ಕುಮಾರ್, ಅಂಕಿತ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾದ ಟೀಂ ಇಂಡಿಯಾ!
ಕರ್ನಾಟಕದ ಅಭಿಮನ್ಯು ಮಿಥುನ್ ದಾಖಲೆ ಸರಿಗಟ್ಟಿದ ಬೌಲರ್‌, ಟಿ20ಯ ಒಂದೇ ಓವರ್‌ನಲ್ಲಿ ಐದು ವಿಕೆಟ್‌ ವಿಶ್ವದಾಖಲೆ!