ಟೆನಿಸ್ ಆಟವನ್ನು ಆಡದೆ ಇರುವುದರಿಂದ ಏನನ್ನು ಕಳೆದುಕೊಂಡಿದ್ದೇನೆ ಎನಿಸುತ್ತಿದೆ ಎಂದಿದ್ದಾರೆ. ಮುಂದಿನ ವರ್ಷ ಟೆನಿಸ್‌ಗೆ ಮರಳುವ ಯೋಚನೆಯಿದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.
ನವದೆಹಲಿ(ಡಿ.20): ಕಳೆದ ತಿಂಗಳಷ್ಟೇ ಗಂಡು ಮಗುವಿಗೆ ಜನ್ಮ ನೀಡಿ ತಾಯ್ತನ ಅನುಭವಿಸುತ್ತಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, 2019ರ ಋತುವಿನಲ್ಲಿ ಟೆನಿಸ್ ಅಂಗಳಕ್ಕೆ ಮರಳುವ ಗುರಿ ಹೊಂದಿದ್ದಾರೆ.
ಟೆನಿಸ್ ಆಟವನ್ನು ಆಡದೆ ಇರುವುದರಿಂದ ಏನನ್ನು ಕಳೆದುಕೊಂಡಿದ್ದೇನೆ ಎನಿಸುತ್ತಿದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಮುಂದಿನ ವರ್ಷ ಟೆನಿಸ್‌ಗೆ ಮರಳುವ ಯೋಚನೆಯಿದೆ. ಉತ್ತಮ ಆಟಗಾರ್ತಿಯಂತೆ, ಅತ್ಯುತ್ತಮ ತಾಯಿಯೂ ಆಗಬೇಕೆಂದುಕೊಂಡಿದ್ದೇನೆ. ಟೆನಿಸ್‌ನಿಂದ ದೂರವಾಗಿ ಬಹಳ ದಿನಗಳಾಗಿವೆ. ಹಾಗಾಗಿ ನಿಧಾನವಾಗಿ ಸಿದ್ಧತೆ ಆರಂಭಿಸುವ ಅಗತ್ಯವಿದೆ. ಇಷ್ಟರಲ್ಲೇ ಅಂಗಳಕ್ಕೆ ಬರುವ ವಿಶ್ವಾಸವಿದೆ’ ಎಂದು ಸಾನಿಯಾ ಹೇಳಿದ್ದಾರೆ.
ಸಾನಿಯಾ ಮಿರ್ಜಾ ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸಾನಿಯಾ ಮಿರ್ಜಾ-ಶೋಯೆಬ್ ಮಲ್ಲಿಕ್ ದಂಪತಿಯ ಮಗುವಿಗೆ ಇಜಾನ್ ಎಂದು ಹೆಸರಿಟ್ಟಿದ್ದಾರೆ.