ಚಾಹಲ್ ದಾಳಿಗೆ ಹರಿಣಿಗಳು ಧೂಳಿಪಟ, ಭಾರತಕ್ಕೆ ಭರ್ಜರಿ ಜಯ: ಸರಣಿ 2-0 ಮುನ್ನಡೆ

Published : Feb 04, 2018, 05:14 PM ISTUpdated : Apr 11, 2018, 12:39 PM IST
ಚಾಹಲ್ ದಾಳಿಗೆ ಹರಿಣಿಗಳು ಧೂಳಿಪಟ, ಭಾರತಕ್ಕೆ ಭರ್ಜರಿ ಜಯ: ಸರಣಿ 2-0 ಮುನ್ನಡೆ

ಸಾರಾಂಶ

ಯಶಸ್ವಿ ಬೌಲಿಂಗ್ ಮಾಡಿದ ಚಾಹಲ್ 22/5 ಹಾಗೂ ಕುಲ್ದೀಪ್ ಯಾದವ್ 20/3 ಪಡೆಯುವ ಮೂಲಕ ಹರಿಣಿಗಳ ಪಡೆಯನ್ನು 32.2 ಓವರ್'ಗಳಲ್ಲಿ  118 ರನ್'ಗಳಿಗೆ ಹಡೆಮುರಿ ಕಟ್ಟಿದರು. ಭುವನೇಶ್ವರ್ ಕುಮಾರ್ ಬುಮ್ರಾ ಕೂಡ ತಲಾ ಒಂದೊಂದು ವಿಕೇಟ್ ಪಡೆದರು.

ಸೆಂಚೂರಿಯನ್(ಫೆ.04): ಸ್ಪಿನ್ನರ್'ಗಳಾದ ಯಜುವೇಂದ್ರ ಚಾಹಲ್ ಹಾಗೂ ಕುಲ್ದೀಪ್ ಯಾದವ್ ದಾಳಿಗೆ ಕುಸಿದ ದಕ್ಷಿಣ ಆಫ್ರಿಕಾ ತಂಡ 118 ರನ್'ಗಳಿಗೆ ಆಲೌಟ್ ಆಗಿ ಭಾರತದ ವಿರುದ್ಧ 9 ವಿಕೇಟ್'ಗಳ ಸೋಲನ್ನು ಅನುಭವಿಸಿತು.

2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾರ್ಕಾಮ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಎಬಿಡಿ ಹಾಗೂ ಡುಪ್ಲಸಿಸ್ ಅನುಪಸ್ಥಿತಿಯಲ್ಲಿ ಆಟ ಆರಂಭಿಸಿದ ಹಾಶೀಮ್ ಆಮ್ಲ ಹಾಗೂ ಡಿಕಾಕ್ ಬ್ಯಾಟಿಂಗ್ ಇಳಿದರು. 10 ಓವರ್'ಗಳ ತನಕ ನಿಧಾನಗತಿಯಲ್ಲಿ ಆಟವಾಡಿದ ಇವರಿಬ್ಬರ ಜೋಡಿಯನ್ನು ವೇಗಿ ಭುವನೇಶ್ವರ್ ಕುಮಾರ್ ಆಮ್ಲ(23) ಅವರನ್ನು ಔಟ್ ಮಾಡಿ ಮುರಿದರು.

ಚಾಹಲ್, ಕುಲ್ದೀಪ್ ದಾಳಿಗೆ 118 ರನ್'ಗಳಿಗೆ ಕುಸಿತ

ಭುವಿ ಮೊದಲ ವಿಕೇಟ್ ಪಡೆದ ನಂತರ ಶುರುವಾದದ್ದು ಸ್ಪಿನ್ನರ್'ಗಳಾದ ಚಾಹಲ್ ಹಾಗೂ ಕುಲ್ದೀಪ್ ಮಾರಕ ದಾಳಿ. ಆಮ್ಲ ನಂತರ ನಾಲ್ಕನೆ ಪಂದ್ಯವಾಡಿದ ಮೊದಲ ಕ್ರಮಾಂಕದಲ್ಲಿ ಆಗಮಿಸಿದ ಯುವ ನಾಯಕ ಮಾಕ್ರಾಮ್(8) ಹೆಚ್ಚು ಹೊತ್ತು ನಿಲ್ಲಲಿಲ್ಲ. ಉಳಿದ ಬ್ಯಾಟ್ಸ್'ಮೆನ್'ಗಳು ಚಾಹಲ್ ಹಾಗೂ ಕುಲ್ದೀಪ್ ಸ್ಪಿನ್ ಅಸ್ತ್ರಕ್ಕೆ ಸರದಿ ಸಾಲಿನಲ್ಲಿ ಪೆವಿಲಿಯನ್'ಗೆ ತೆರಳಿದರು.ಡುಮನಿ(25),ಜೊಂಡು(25) ಹೊರತುಪಡಿಸಿ ಉಳಿದವ'ರ್ಯಾರು 20ರ ಗಡಿ ದಾಟಲಿಲ್ಲ.

ಯಶಸ್ವಿ ಬೌಲಿಂಗ್ ಮಾಡಿದ ಚಾಹಲ್ 22/5 ಹಾಗೂ ಕುಲ್ದೀಪ್ ಯಾದವ್ 20/3 ಪಡೆಯುವ ಮೂಲಕ ಹರಿಣಿಗಳ ಪಡೆಯನ್ನು 32.2 ಓವರ್'ಗಳಲ್ಲಿ  118 ರನ್'ಗಳಿಗೆ ಹಡೆಮುರಿ ಕಟ್ಟಿದರು. ಭುವನೇಶ್ವರ್ ಕುಮಾರ್ ಬುಮ್ರಾ ಕೂಡ ತಲಾ ಒಂದೊಂದು ವಿಕೇಟ್ ಪಡೆದರು.

ಶೀಘ್ರದಲ್ಲೇ ಪಂದ್ಯ ಮುಗಿಸಿದ ಕೊಹ್ಲಿ, ಶಿಖರ್ ಧವನ್

119 ರನ್'ಗಳ ಸುಲಭದ ಗುರಿಯನ್ನು ಬೆನ್ನತ್ತಿದ ಕೊಹ್ಲಿ ಪಡೆ ಆರಂಭದಲ್ಲಿಯೇ ರೋಹಿತ್ ಶರ್ಮಾ(15) ಅವರ ವಿಕೇಟ್ ಪಡೆದುಕೊಂಡಿತು. ನಂತರ ಶಿಖರ್ ಧವನ್(51) ಹಾಗೂ ನಾಯಕ ವಿರಾಟ್ ಕೊಹ್ಲಿ(46) ಮುರಿಯದ 2ನೇ ವಿಕೇಟ್'ಗೆ  93 ಜೊತೆಯಾಟದಲ್ಲಿ ಕೇವಲ 20.3 ಓವರ್'ಗಳಲ್ಲಿ ಪಂದ್ಯ ಮುಗಿಸಿದರು. 5 ವಿಕೇಟ್ ಪಡೆದ ಚಾಹಲ್ ಪಂದ್ಯ ಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರು.

ಸ್ಕೋರ್ ವಿವರ

ದಕ್ಷಿಣ ಆಫ್ರಿಕಾ 32.2 ಓವರ್'ಗಳಲ್ಲಿ 118

(ಡುಮನಿ 25, ಜೊಂಡೊ 25, ಚಾಹಲ್ 22/5, ಕುಲ್ದೀಪ್ 20/3)

ಭಾರತ 20.3 ಓವರ್'ಗಳಲ್ಲಿ 119

(ಧವನ್ 51, ಕೊಹ್ಲಿ 46, ರಬಡಾ 24/1)

ಫಲಿತಾಂಶ : ಭಾರತಕ್ಕೆ 9 ವಿಕೇಟ್'ಗಳ ಜಯ

ಪಂದ್ಯ ಶ್ರೇಷ್ಠ: ಯಜುವೇಂದ್ರ ಚಾಹಲ್  

ಭಾರತ 2-0 ಸರಣಿ ಮುನ್ನಡೆ, ಮೂರನೆ ಪಂದ್ಯ ಫೆ.07

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI
ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು