ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಸ್ಪರ್ಧೆಯಿಂದ ಭಾರ ತೀಯ ಕುಸ್ತಿ ಫಡರೇಶನ್ (ಡಬ್ಲ್ಯುಎಫ್‌ಐ) ಹಿಂದೆ ಸರಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯ ತನ್ನ ದೈನಂದಿನ ವ್ಯವಹಾರಗಳಲ್ಲಿ ತಲೆ ಹಾಕುತ್ತಿದೆ ಎಂದು ಆರೋಪಿಸಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಸ್ಪರ್ಧೆಯಿಂದ ಭಾರ ತೀಯ ಕುಸ್ತಿ ಫಡರೇಶನ್ (ಡಬ್ಲ್ಯುಎಫ್‌ಐ) ಹಿಂದೆ ಸರಿದಿದೆ. ಹಿರಿಯರ ವಿಶ್ವ ಚಾಂಪಿಯನ್‌ಶಿಪ್ ಅಲ್ಟಾನಿಯಾದಲ್ಲಿ ಅಕ್ಟೋಬರ್ 28ರಿಂದ ಆರಂಭಗೊಳ್ಳಲಿದೆ.
'ಕುಸ್ತಿ ಸಂಸ್ಥೆಯ ಆಯ್ಕೆ ಟ್ರಯಲ್ಸ್ ವಿರುದ್ಧ ಕೆಲ ಕುಸ್ತಿಪಟುಗಳು ನ್ಯಾಯಾಲಯಕ್ಕೆ ಹೋಗಿದ್ದಾರೆ. ಕ್ರೀಡಾ ಸಚಿವಾಲಯ ಡಬ್ಲ್ಯುಎಫ್‌ಐಅನ್ನು ಅಮಾನತು ಮಾಡಿದ್ದರಿಂದಲೇ ಹೀಗಾಗಿದೆ. ಸದ್ಯ ನಾವು ವಿಶ್ವ ಕುಸ್ತಿ ಕೂಟಕ್ಕೆ ತಂಡ ಕಳುಹಿಸುವ ಸ್ಥಿತಿಯಲ್ಲಿಲ್ಲ' ಎಂದು ಡಬ್ಲ್ಯುಎಫ್‌ಐ ತಿಳಿ ಸಿದ್ದಾಗಿ ಮಾಧ್ಯಮದಲ್ಲಿ ವರದಿಯಾಗಿದೆ.
undefined
ಪ್ರೊ ಕಬಡ್ಡಿ ಲೀಗ್: ಬೆಂಗಾಲ್, ಹರ್ಯಾಣಕ್ಕೆ ಗೆಲುವು
ಹೈದರಾಬಾದ್: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುರುವಾರ ಹರ್ಯಾಣ ಸ್ಟೀಲರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಗೆಲುವು ಸಾಧಿಸಿವೆ.
ಮೊದಲ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಬೆಂಗಾಲ್ 32-29 ಅಂಕಗಳಿಂದ ಜಯ ತನ್ನದಾಗಿಸಿಕೊಂಡಿತು. ಯೋಧಾಸ್‌ನ ಭರತ್ ಹೂಡಾ(13) ಹೋರಾಟ ವ್ಯರ್ಥವಾಯಿತು. ಬೆಂಗಾಲ್ ಪರ ಮಣೀಂದರ್ ಸಿಂಗ್ 8, ಕರ್ನಾಟಕದ ಸುಶೀಲ್ ಕಾಂಬ್ರೇಕರ್ ಹಾಗೂ ನಿತಿನ್ ತಲಾ 7 ಅಂಕ ಗಳಿಸಿದರು.
14ನೇ ವರ್ಷದಲ್ಲೇ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಭಾರತದ ಮಾಜಿ ನಾಯಕಿ ರಾಂಪಾಲ್ ಹಾಕಿಗೆ ನಿವೃತ್ತಿ
ದಿನದ ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಹರ್ಯಾಣ 37-25 ಅಂಕಗಳಿಂದ ಜಯಗಳಿಸಿತು. ಕಳೆದ ಬಾರಿ ರನ್ನರ್-ಅಪ್ ಹರ್ಯಾಣ ಪರ ವಿನಯ್ 10 ರೈಡ್ ಅಂಕ ಗಳಿಸಿದರು.
ಇಂದಿನ ಪಂದ್ಯಗಳು
ಪಾಟ್ನಾ ಪೈರೇಟ್ಸ್-ತಮಿಳ್ ತಲೈವಾಸ್, ರಾತ್ರಿ 8ಕ್ಕೆ
ಇಂದು ಬಿಎಫ್‌ಸಿ-ಕೇರಳ ಫೈಟ್
ಕೊಚ್ಚಿ: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಲೀಗ್‌ನ ಶುಕ್ರವಾರದ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿಗೆ ಆತಿಥೇಯ ಕೇರಳ ಬ್ಲಾಸ್ಟರ್ಸ್ ಸವಾಲು ಎದುರಾಗಲಿದೆ. ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಆಡಿರುವ 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದ್ದು, 1 ಪಂದ್ಯ ಡ್ರಾಗೊಂಡಿದೆ. ತಂಡ ಒಂದೂ ಗೋಲು ಬಿಟ್ಟುಕೊಟ್ಟಿಲ್ಲ. ಅತ್ತ ಕೇರಳ ಆಡಿರುವ 5 ಪಂದ್ಯಗಳಲ್ಲಿ ತಲಾ 2 ಗೆಲುವು, ಸೋಲು ಕಂಡಿದ್ದು, 1 ಡ್ರಾಗೊಂಡಿದೆ.
ಐಪಿಎಲ್ ಮೆಗಾ ಹರಾಜಿಗೆ ಬರಲು ರಿಷಭ್ ಪಂತ್ ಒಲವು; ಆರ್‌ಸಿಬಿಗೆ ಕರೆತರಲು ಬೆಂಗಳೂರು ಫ್ರಾಂಚೈಸಿ ರಣತಂತ್ರ?
ಪಂದ್ಯ: ಸಂಜೆ 7.30ಕ್ಕೆ
ಬೆಂಗಳೂರು ಬುಲ್ಸ್-ಪುಣೇರಿ ಪಲ್ಟನ್, ರಾತ್ರಿ 9ಕ್ಕೆ
ಹಾಕಿ: ಜರ್ಮನಿ ವಿರುದ್ಧ ಭಾರತಕ್ಕೆ 0-2 ಸೋಲು
ನವದೆಹಲಿ: ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 2 ಪಂದ್ಯಗಳ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಬುಧವಾರ 0-2 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ. ಇತ್ತಂಡಗಳ ನಡುವಿನ 2ನೇ ಪಂದ್ಯ ಗುರುವಾರ ನಡೆಯಲಿದೆ.