
ಮುಂಬೈ(ಮೇ.04): ಜೂನ್ 1ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಪಿ'ಗೆ ಭಾರತ ತಂಡವನ್ನು ತಕ್ಷಣ ಆಯ್ಕೆ ಮಾಡುವಂತೆ ಬಿಸಿಸಿಐ'ಗೆ ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿ ನಿರ್ದೇಶಿಸಿದೆ.
ಈಗಾಗಲೇ ಏಪ್ರಿಲ್ 25ಕ್ಕೆ ತಂಡದ ಸದಸ್ಯರನ್ನು ಆಯ್ಕೆ ಮಾಡಲು ಗಡುವು ನೀಡಲಾಗಿತ್ತು. ಆದರೆ ಇನ್ನು ಏಕೆ ನೇಮಕ ಮಾಡಿಲ್ಲ '. ಶೀಘ್ರದಲ್ಲಿಯೇ ಆಯ್ಕೆ ಸಮಿತಿ ಸಭೆ ಕರೆದು ತಂಡ ರಚಿಸಬೇಕು ಎಂದು ಬಿಸಿಸಿಐ'ನ ಅಮಿತಾಭ್ ಚೌದರಿ ಅವರಿಗೆ ಸಮಿತಿ ಆದೇಶಿಸಿದೆ. ಇತ್ತೀಚಿಗೆ ದುಬೈನಲ್ಲಿ ನಡೆದ ಸಭೆಯಲ್ಲಿ ಐಸಿಸಿಯೊಂದಿಗೆ ಯಾವ ರೀತಿ ಆದಾಯ ಪ್ರಕ್ರಿಯೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದನ್ನು ಸಹ ತಿಳಿಸಬೇಕು' ಎಂದು ಕೇಳಿದೆ.
ಬಿಸಿಸಿಐ ಸ್ವಪ್ರತಿಷ್ಟೆ ಬಿಡಬೇಕು ಅಲ್ಲದೆ ಭಾರತವು ವಿಶ್ವದಲ್ಲಿಯೇ ಅತ್ಯತ್ತಮ ಕ್ರಿಕೆಟ್ ತಂಡವೆಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದೆ. ಐಪಿಎಲ್ ನಂತರ ಇಂಗ್ಲೆಂಡ್'ನಲ್ಲಿ ಜೂನ್ 1ರಿಂದ 18ವರೆಗೂ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ'ಯಲ್ಲಿ ಭಾರತ ಒಳಗೊಂಡು 8 ತಂಡಗಳು ಸೆಣಸಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.