ಇಂಡಿಯಾ-ವೆಸ್ಟ್ಇಂಡೀಸ್ 2ನೇ ODI ಮೈದಾನ ಬದಲು

By Web DeskFirst Published Oct 3, 2018, 6:08 PM IST
Highlights

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಅಂತಿಮ ಹಂತದಲ್ಲಿ ಸ್ಥಳಾಂತರವಾಗಿದೆ. ಉಚಿತ ಟಿಕೆಟ್ ವಿಚಾರಕ್ಕೆ ನಡೆದ ಜಗಳದಿಂದ ಬಿಸಿಸಿಐ ಪಂದ್ಯವನ್ನೇ ಶಿಫ್ಟ್ ಮಾಡಿದೆ. ಹಾಗಾದರೆ 2ನೇ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ? ಇಲ್ಲಿದೆ ವಿವರ.
 

ಮುಂಬೈ(ಅ.03): ಉಚಿತ ಟಿಕೆಟ್ ವಿಚಾರಕ್ಕೆ ನಡೆದ ಜಗಳದಿಂದ ಇದೀಗ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಸ್ಥಳಾಂತರಗೊಂಡಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಆಯೋಜಿಸಲಾಗಿದ್ದ 2ನೇ ಏಕದಿನ ಪಂದ್ಯ ಇದೀಗ ವಿಶಾಖಪಟ್ಟಣಂಗೆ ಸ್ಥಳಾಂತರವಾಗಿದೆ.

ಬಿಸಿಸಿಐ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಡುವಿನ ಉಚಿತ ಟಿಕೆಟ್‌ಗಳ ಹಂಚಿಕೆ ವಿವಾದದಿಂದಾಗಿ ಪಂದ್ಯ ಆಯೋಜಿಸಲು ಮದ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಹಿಂದೇಟು ಹಾಕಿತ್ತು. ಪಟ್ಟು ಸಡಿಲಿಸಿದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಗೆ ಪಾಠ ಕಲಿಸಲು ಮುಂದಾದ ಬಿಸಿಸಿಐ ಇದೀಗ 2ನೇ ಏಕದಿನ ಪಂದ್ಯವನೇ ಸ್ಥಳಾಂತರವನ್ನ ಮಾಡಿದೆ.

ಬಿಸಿಸಿಐ ನೂತನ ನಿಯಮದ ಪ್ರಕಾರ ಪಂದ್ಯದ ಶೇಕಡಾ 90 ರಷ್ಟು ಟಿಕೆಟ್‌ಗಳನ್ನ ಸಾರ್ವಜನಿಕರ ಮಾರಾಟಕ್ಕೆ ಇಡಬೇಕು. ಇನ್ನುಳಿದ ಶೇಕಡಾ 10 ರಷ್ಟು ಟಿಕೆಟ್‌ಗಳನ್ನ ಮಾತ್ರ ಕಾಂಪ್ಲಿಮೆಂಟರಿ ಟಿಕೆಟ್‌ಗಳಾಗಿ ನೀಡಬೇಕು. ಮಧ್ಯಪ್ರದೇಶದ ಇಂದೋರ್ ಕ್ರೀಡಾಂಗಣದ ಒಟ್ಟು ಸಾಮರ್ಥ್ಯ 27,500. ಹೀಗಾಗಿ ಉಚಿತ ಟಿಕೆಟ್ ಸಂಖ್ಯೆ 2750 ಮಾತ್ರ.

2750 ಉಚಿತ ಟಿಕೆಟ್‌ಗಳಲ್ಲಿ ಪ್ರಾಯೋಜಕರಿಗೆ ಹಂಚಿಲು ಬಿಸಿಸಿಐ ಸೂಚಿಸಿದೆ. ಇದನ್ನ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಿರಾಕರಿಸಿತ್ತು. ಹೀಗಾಗಿ ಬಿಸಿಸಿಐ ಇಂದೋರ್ ಪಂದ್ಯವನ್ನ ವಿಶಾಖಪಟ್ಟಂಗೆ ಸ್ಥಳಾಂತರ ಮಾಡಿದೆ.

click me!