
ಬೆಂಗಳೂರು[ಅ.03]: ಬಿಸಿಸಿಐ ಆರ್‌ಟಿಐ ವ್ಯಾಪ್ತಿಗೆ ಸೇರ್ಪಡೆಗೊಳ್ಳಲು ಏಕೆ ನಿರಾಕರಿಸುತ್ತಿದೆ ಇಲ್ಲವೇ ಹಿಂಜರಿಯುತ್ತಿದೆ ಎನ್ನುವುದನ್ನು ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಇದನ್ನು ಓದಿ: ಆಡಳಿತ ಸಮಿತಿ ಮೇಲೆ ಬಿಸಿಸಿಐ ಗರಂ!
ಆರ್‌ಟಿಐ ಅಡಿ ಬಂದರೆ ಯಾವೆಲ್ಲಾ ಮಾಹಿತಿಗಳನ್ನು ಸಾರ್ವಜನಿಕರು ಕೇಳಬಹುದು ಎನ್ನುವುದರ ಅರಿವು ಬಿಸಿಸಿಐಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಒಂದೊಮ್ಮೆ ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಸೇರ್ಪಡೆಗೊಂಡರೆ ಯಾವೆಲ್ಲಾ ಮಾಹಿತಿ ಹೊರಬರಬಹುದು ಎನ್ನುವ ವಿವರ ಇಲ್ಲಿದೆ.
* ತಂಡದ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ?
* ಆಯ್ಕೆ ಪ್ರಕ್ರಿಯೆಯಲ್ಲಿ ಐಪಿಎಲ್ ಫ್ರಾಂಚೈಸಿಗಳ ಪಾತ್ರವಿದೆಯೇ?
* ಷೇರು ಹಂಚಿಕೆ ಮಾದರಿ, ಬಂಡವಾಳ ಹೂಡಿಕೆ ವಿವರ
* ಆಡಳಿತದಲ್ಲಿರುವ ಕೆಲ ಹಿರಿಯ ಅಧಿಕಾರಿಗಳು ವರ್ತನೆ
* ಕಾರ್ಯ ಸ್ಥಳದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳ ಕುರಿತ ಮಾಹಿತಿ
* ಹಿರಿಯ ಆಟಗಾರರು ನಡೆಸುತ್ತಿರುವ ಸಂಸ್ಥೆಗಳೊಂದಿಗೆ ಒಪ್ಪಂದದಲ್ಲಿರುವ ಕಿರಿಯ ಆಟಗಾರರಿಗೆ ಅವಕಾಶವಿದೆಯೇ?
* ಆಟಗಾರರ ಜಾಹೀರಾತು ಒಪ್ಪಂದಗಳು ಎಷ್ಟು ಪಾರದರ್ಶಕವಾಗಿವೆ?
* ವಿವಿಧ ವಯೋಮಿತಿಗಳ ತಂಡಗಳಿಗೆ ನಡೆಸುತ್ತಿರುವ ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.