ಇಂಡೋ-ಕಿವೀಸ್ ಏಕದಿನ: ಟೀಂ ಇಂಡಿಯಾ 92 ರನ್‌ಗೆ ಆಲೌಟ್ !

By Web DeskFirst Published Jan 31, 2019, 9:57 AM IST
Highlights

ನ್ಯೂಜಿಲೆಂಡ್ ವಿರುದ್ಧದ  4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಿವೀಸ್ ದಾಳಿಗೆ ತತ್ತರಿಸಿದ ಭಾರತ, ಕೇವಲ 92 ರನ್‌ಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಇನ್ನಿಂಗ್ಸ್ ಹೈಲೈಟ್ಸ್ ಇಲ್ಲಿದೆ.
 

ಹ್ಯಾಮಿಲ್ಟನ್(ಜ.31): ನ್ಯೂಜಿಲೆಂಡ್ ವಿರುದ್ಧ ಆರಂಭಿಕ 3 ಪಂದ್ಯ ಗೆಲ್ಲೋ ಮೂಲಕ ಸರಣಿ ಕೈವಶ ಮಾಡಿದ್ದ ಟೀಂ ಇಂಡಿಯಾ 4ನೇ ಪಂದ್ಯದಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿರುವ ಟೀಂ ಇಂಡಿಯಾ, ಟ್ರೆಂಟ್ ಬೋಲ್ಟ್ ದಾಳಿಗೆ ತತ್ತರಿಸಿತು. ಹೀಗಾಗಿ ಕೇವಲ 35.5 ಓವರ್‌ಗಳಲ್ಲಿ 92 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತದ 7ನೇ ಅತ್ಯಲ್ಪ ಮೊತ್ತ ಅನ್ನೋ ಅಪಖ್ಯಾತಿಗೆ ಗುರಿಯಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಧವನ್ 13 ರನ್ ಸಿಡಿಸಿ ಔಟಾದರು. 6ನೇ ಓವರ್‌ನಿಂದ ಆರಂಭವಾದ ಭಾರತದ ವಿಕೆಟ್ ಪತನ 14ನೇ ಓವರ್ ಆರಂಭಕ್ಕೆ 6 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಗೆ ತಲುಪಿದೆ.

ನಾಯಕ ರೋಹಿತ್ ಶರ್ಮಾ 7, ತಂಡಕ್ಕೆ ಪಾದಾರ್ಪಣೆ ಮಾಡಿದ ಶುಭ್‌ಮಾನ್ ಗಿಲ್ 9, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್ ಶೂನ್ಯ ಸುತ್ತಿದರೆ, ಕೇದಾರ್ ಜಾಧವ್ 1 ರನ್ ಸಿಡಿಸಿ ಔಟಾದರು. 35 ರನ್‌ಗೆ 6 ವಿಕೆಟ್ ಕಳೆದುಕೊಂಡ ಭಾರತ ಅಲ್ಪ ಮೊತ್ತಕ್ಕೆ ಆಲೌಟ್ ಆದ ಮುಖಭಂಗ ತಪ್ಪಿಸಲು ಹೋರಾಟ ನಡೆಸಿತು.

ಭುವನೇಶ್ವರ್ ಕುಮಾರ್ 1 ರನ್ ಸಿಡಿಸಿ ಔಟಾದರೆ, ಹಾರ್ದಿಕ್ ಪಾಂಡ್ಯ 16 ರನ್ ಕಾಣಿಕೆ ನೀಡಿದರು. ಈ ಮೂಲಕ ಭಾರತ 50 ರನ್ ಗಡಿ ದಾಟಿತು. ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಹೋರಾಟದಿಂದ ಭಾರತ ಅತ್ಯಲ್ಪ ಮೊತ್ತದ ಭೀತಿಯಿಂದ ಪಾರಾಯಿತು. 

ಕುಲ್ದೀಪ್ 15 ರನ್ ಸಿಡಿಸಿ ಔಟಾದರು. ಖಲೀಲ್ ಅಹಮ್ಮದ್ 5 ರನ್ ಸಿಡಿಸಿ ಔಟಾದರು. ಇನ್ನು ಯಜುವೇಂದ್ರ ಚಹಾಲ್ ಅಜೇಯ 18 ರನ್ ಸಿಡಿಸಿದರು. ಈ ಮೂಲಕ ಭಾರತ 92 ರನ್‌ಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ವಿರುದ್ಧ ಭಾರತದ 2ನೇ ಅತ್ಯಲ್ಪ ಮೊತ್ತ ಅನ್ನೋ ಅಪಖ್ಯಾತಿಗೆ ಗುರಿಯಾಯ್ತು. ಇದಕ್ಕೂ ಮೊದಲು 2000ನೇ ಇಸವಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 81 ರನ್‌ಗೆ ಆಲೌಟ್ ಆಗಿತ್ತು.  ಟ್ರೆಂಬ್ ಬೋಲ್ಟ್ 5, ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ 3, ಟೊಡ್ ಆಶ್ಲೆ, ಜೇಮ್ಸ್ ನೀಶಮ್ ತಲಾ 1 ವಿಕೆಟ್ ಕಬಳಿಸಿದ್ದಾರೆ. 

click me!