5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ-ಯಾರು ಇನ್?ಯಾರು ಔಟ್?

Published : Sep 06, 2018, 07:08 PM ISTUpdated : Sep 09, 2018, 10:25 PM IST
5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ-ಯಾರು ಇನ್?ಯಾರು ಔಟ್?

ಸಾರಾಂಶ

ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡ ಪ್ರಕಟಿಸಿದೆ. ತಂಡದಲ್ಲಿ ಉಳಿದುಕೊಂಡವರು ಯಾರು? ವಿದಾಯ ಪಂದ್ಯ ಆಡಲು ಸಜ್ಜಾದ ಅಲಿಸ್ಟೈರ್ ಕುಕ್‌ಗೆ ಸ್ಥಾನ ನೀಡಲಾಗಿದೆಯಾ? ಇಲ್ಲಿದೆ ವಿವರ.

ಲಂಡನ್(ಸೆ.06): ಭಾರತ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಲಾಗಿದೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ಜೋ ರೂಟ್ 11 ಆಟಗಾರರ ತಂಡ ಪ್ರಕಟಿಸಿದರು.

3-1 ಅಂತರದಲ್ಲಿ ಸರಣಿ ಗೆದ್ದಿರುವ ಇಂಗ್ಲೆಂಡ್ ಇದೀಗ 5ನೇ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಹೀಗಾಗಿ ಇಂಗ್ಲೆಂಡ್ ಅಂತಿಮ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಅಲಿಸ್ಟೈರ್ ಕುಕ್‌ಗೆ ಇದು ವಿದಾಯದ ಪಂದ್ಯ. ಹೀಗಾಗಿ ಗೆಲುವಿನ ವಿದಾಯ ನೀಡಲು ಇಂಗ್ಲೆಂಡ್ ನಿರ್ಧರಿಸಿದೆ. ಕಳೆದ ಪಂದ್ಯದಲ್ಲಿ ಸ್ಪಿನ್ ದಾಳಿ ಮೂಲಕ ಭಾರತಕ್ಕೆ ಕಂಟಕವಾದ ಮೊಯಿನ್ ಆಲಿ ಇದೀಗ ಮತ್ತೊಮ್ಮೆ ಸಂಕಷ್ಟ ತರೋ ಸಾಧ್ಯತೆ ಇದೆ.

ಇಂಗ್ಲೆಂಡ್ ತಂಡ:

ಜೂ ರೂಟ್(ನಾಯಕ),ಅಲಿಸ್ಟೈರ್ ಕುಕ್, ಕೆಟನ್ ಜೆನ್ನಿಂಗ್ಸ್, ಮೊಯಿನ್ ಆಲಿ, ಜಾನಿ ಬೈರ್‌ಸ್ಟೋ,  ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರ್ರನ್, ಆದಿಲ್ ರಶೀದ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 Final: ಆರ್‌ಸಿಬಿಗೆ ಈ ಸಲವೂ ಸಿಗುತ್ತಾ ಕಪ್‌? ತವರಲ್ಲಿ ಸೇಡಿಗೆ ರೆಡಿಯಾದ ಗುಜರಾತ್ ಟೈಟಾನ್ಸ್‌!
IPL 2026 Final RCB vs GT Match Live: ಸತತ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟ ಆರ್‌ಸಿಬಿಗಿಂದು ಗುಜರಾತ್ ಟೈಟಾನ್ಸ್ ಸವಾಲು!