ಭಾರತ-ಇಂಗ್ಲೆಂಡ್ ಏಕದಿನ: ಲಾರ್ಡ್ಸ್ ಮೈದಾನದಲ್ಲಿ ಮದುವೆ ಪ್ರಪೋಸಲ್!ಹುಡುಗಿ ಉತ್ತರ ಏನು?

Published : Jul 14, 2018, 08:08 PM ISTUpdated : Jul 14, 2018, 08:10 PM IST
ಭಾರತ-ಇಂಗ್ಲೆಂಡ್ ಏಕದಿನ: ಲಾರ್ಡ್ಸ್ ಮೈದಾನದಲ್ಲಿ ಮದುವೆ ಪ್ರಪೋಸಲ್!ಹುಡುಗಿ ಉತ್ತರ ಏನು?

ಸಾರಾಂಶ

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2 ನೇ ಏಕದಿನ ಪಂದ್ಯದ ನಡುವೆ ಸ್ಮರಣೀಯ ಘಟನೆ ನಡೆದಿದೆ. ಗೆಳೆತಿಯೊಂದಿಗೆ ಪಂದ್ಯ ವೀಕ್ಷಿಸಲು ಆಗಮಿಸಿದ ಹುಡುಗ ನೇರವಾಗಿ ಮದುವೆ ಪ್ರಪೋಸಲ್ ಮುಂದಿಟ್ಟಿದ್ದಾನೆ.  ಹುಡುಗನ ಮನವಿಗೆ ಹುಡುಗಿಯ ಉತರವೇನಿತ್ತು? ಇಲ್ಲಿದೆ.

ಲಂಡನ್(ಜು.14): ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅನ್ನೋ ಮಾತಿದೆ. ಆದರೆ ಸದ್ಯ ಈ ಮಾತು ಸ್ವಲ್ಪ ಬದಲಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಮದುವೆ ನಿಶ್ಚಯವಾದ ಘಟನೆ ನಡೆದಿದೆ.

ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿರುವ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ಮದುವೆ ಪ್ರಪೋಸಲ್ ಮಾಡೋ ಮೂಲಕ ಯುವ ಜೋಡಿಗಳು ತಮ್ಮ ವಿಶೇಷ ಘಳಿಗೆಯನ್ನ ಸ್ಮರಣೀಯವಾಗಿಸಿದ್ದಾರೆ. 

ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವೇಳೆ ಗ್ಯಾಲರಿಯಲ್ಲಿದ್ದ ಹುಡುಗ ತನ್ನ ಗೆಳತಿಗೆ ರಿಂಗ್ ಹಿಡಿದು ಮದುವೆ ಮನವಿ ಮಾಡಿದರು. ಅದೃಷ್ಟವಶಾತ್ ಹುಡುಗಿ ಆತನ ಪ್ರಪೋಸಲ್‌ ಒಪ್ಪಿಕೊಂಡಿದ್ದಾಳೆ. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಮದುವೆ ಪ್ರಸ್ತಾಪ ಯಶಸ್ವಿಯಾಗಿದೆ.

 

 

ಇವರಿಬ್ಬರ ಮದುವೆ ಪ್ರಪೋಸಲ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಪ್ರಪೋಸಲ್‌ಗೆ ಇದಕ್ಕಿಂತ ಉತ್ತಮ ಜಾಗ ಮತ್ತೊಂದಿಲ್ಲ ಎಂದು ಹಲವು ಟ್ವೀಟ್ ಮಾಡಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ಕಿಲೋಮೀಟರ್ ಸೈಕಲ್‌ನಲ್ಲಿ ಸ್ಟೇಡಿಯಂಗೆ ಬರುತ್ತಿದ್ದ ಆಟಗಾರನಿಗೆ ಸಿಕ್ತು 14 ಕೋಟಿ ನಗದು! ಇದು ಐಪಿಎಲ್ ಜಾದೂ
ಮಿನಿ ಹರಾಜಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್! ₹9.2 ಕೋಟಿ ನೀಡಿ ಖರೀದಿಸಿದ ಈ ಸ್ಟಾರ್ ಕ್ರಿಕೆಟಿಗ ಐಪಿಎಲ್ ಆಡೋದೇ ಡೌಟ್!