
ಲಂಡನ್(ಸೆ.09) : ಮೊದಲ ವಿಶ್ವಯುದ್ಧದಲ್ಲಿ ಮಡಿದ ಭಾರತೀಯ ಯೋಧರ ತ್ಯಾಗ ಹಾಗೂ ಬಲಿದಾನವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ನಾಯಕ ಜೋ ರೂಟ್ ಸ್ಮರಿಸಿದರು.
ಮೊದಲ ಮಹಾಯುದ್ಧ ನಡೆದ ಸಂದರ್ಭದಲ್ಲಿ ಭಾರತ, ಬ್ರಿಟಿಷರ ವಸಾಹತುವಿಗೆ ಒಳಪಟ್ಟಿತ್ತು. ಆದಕಾರಣ ಅನಿವಾರ್ಯವಾಗಿ ಭಾರತೀಯ ಯೋಧರು ಯುದ್ಧದಲ್ಲಿ
ಬ್ರಿಟಿಷರ ಪರ ಹೋರಾಟ ನಡೆಸಿದ್ದರು. ಈ ವೇಳೆ ಅನೇಕರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದರು.
ಇದೀಗ ಮೊದಲ ಮಹಾಯುದ್ಧ ಅಂತ್ಯದ ಶತಮಾನೋತ್ಸವ ಆಚರಣೆ ನಿಮಿತ್ತ ಖಾದಿಯಿಂದ ಸಿದ್ಧ ಪಡಿಸಿದ ಕೆಂಪು ವರ್ಣದ ಪೊಪ್ಪಿ (ಹೂವು)ಯನ್ನು, 5ನೇ ಟೆಸ್ಟ್‌ನ 2ನೇ ದಿನವಾದ ಶನಿವಾರ ಪಂದ್ಯ ಆರಂಭಕ್ಕೂ ಮುನ್ನ ತಮ್ಮ ಬ್ಲೆಸರ್‌ಗೆ ಧರಿಸುವ
ಮೂಲಕ ಯೋಧರನ್ನು ಸ್ಮರಿಸಿದರು.
ಭಾರತೀಯ ಮೂಲದ ಜಿತೇಶ್ ಗಾಧಿಯಾ ಹಾಗೂ ರಾಯಲ್ ಬ್ರಿಟಿಷ್ ಲೀಜನ್ ಚಾರಿಟಿ ಈ ಹೂವನ್ನು ಸಿದ್ಧ ಪಡಿಸಿತ್ತು. ಈ ಪೊಪ್ಪಿ ಹೂವು, ಯುದ್ಧದಲ್ಲಿ ಮಡಿದವರ ಸಾಂಪ್ರದಾಯಿಕ ಚಿಹ್ನೆಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.