
ಬರ್ಮಿಂಗ್‌ಹ್ಯಾಮ್[ಆ.03]: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ದಿನ 4 ವಿಕೆಟ್ ಪಡೆದು ಮಿಂಚಿದ್ದ ಭಾರತದ ಸ್ಪಿನ್ನರ್ ಅಶ್ವಿನ್ ಎರಡನೇ ದಿನದಲ್ಲಿ ಅಲಿಸ್ಟರ್ ಕುಕ್ ವಿಕೆಟ್ ಪಡೆದು ಮಿಂಚಿದ್ದಾರೆ. ‘ಕೌಂಟಿಯಲ್ಲಿ ಆಡಿದ್ದು ಹಾಗೂ ಬೌಲಿಂಗ್ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು ಫಲ ನೀಡಿತು’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅಶ್ವಿನ್ ಮೊದಲ ದಿನದಂತ್ಯಕ್ಕೆ 62 ರನ್‌ಗೆ 4 ವಿಕೆಟ್ ಪಡೆದು ಇಂಗ್ಲೆಂಡ್ ಕುಸಿತಕ್ಕೆ ಕಾರಣರಾಗಿದ್ದರು. ‘ಕಳೆದ 18 ತಿಂಗಳಲ್ಲಿ ಹೆಚ್ಚು ಸಮಯವನ್ನು ಕೌಂಟಿ ಕ್ರಿಕೆಟ್ ಆಡುತ್ತಲೇ ಕಳೆದಿದ್ದೇನೆ.
ಅಗತ್ಯಕ್ಕೆ ತಕ್ಕಂತೆ ಬೌಲಿಂಗ್ ಶೈಲಿ ಬದಲಿಸಿಕೊಂಡಿದ್ದು, ಯಶಸ್ಸು ಕಾಣಲು ನೆರವಾಗುತ್ತಿದೆ’ ಎಂದು ಅಶ್ವಿನ್ ಹೇಳಿದ್ದಾರೆ.
31 ವರ್ಷದ ಅಶ್ವಿನ್ 58 ಪಂದ್ಯಗಳಲ್ಲಿ 317 ವಿಕೆಟ್ ಕಬಳಿಸಿದ್ದು, ಇಂಗ್ಲೆಂಡ್’ನ ಕೌಂಟಿ ಕ್ರಿಕೆಟ್’ನಲ್ಲಿ ವರ್ಸಸ್’ಸ್ಟೈರ್ ತಂಡವನ್ನು ಪ್ರತಿನಿಧಿಸಿದ್ದರು. ಚಾಹಲ್ ಹಾಗೂ ಕುಲ್ದೀಪ್ ಆಗಮನದಿಂದಾಗಿ ಸೀಮಿತ ಓವರ್’ಗಳ ತಂಡದಿಂದ ಹೊರಬಿದ್ದಿರುವ ಅಶ್ವಿನ್ ಕೇವಲ ಟೆಸ್ಟ್ ತಂಡಗಳಿಗೆ ಮಾತ್ರ ಸೀಮಿತವಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.