
ಬ್ರಿಸ್ಬೇನ್(ನ.19): ‘ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸ ಕೈಗೊಂಡಿರುವ ವಿಶ್ವದ ಯಾವುದೇ ತಂಡ ಉತ್ತಮ ಪ್ರದರ್ಶನ ತೋರಿಲ್ಲ. ಹೀಗಿರುವಾಗ ಕೇವಲ
ಭಾರತ ತಂಡವನ್ನು ಮಾತ್ರ ‘ಕಳಪೆ ಪ್ರವಾಸಿಗರು’ ದೂಷಿಸುವುದು ಸರಿಯಲ್ಲ’ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ, ತಂಡವನ್ನು ಸಮರ್ಥಿಸಿ
ಕೊಂಡಿದ್ದಾರೆ.
ಇತ್ತೀಚಿನ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸದ ಸೋಲಿನ ಬಗ್ಗೆ ನೀವು ಅಥವಾ ನಾಯಕ ಕೊಹ್ಲಿ, ತಂಡದ ಸದಸ್ಯರ ಜೊತೆ ಸೋಲಿನ ಕಾರಣಗಳ ಕುರಿತು ಸಮಾಲೋಚನೆ ನಡೆಸಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸ್ತ್ರಿ, ‘ಆಸ್ಟ್ರೇಲಿಯಾ ತಂಡ 90 ರ ದಶಕ ಮತ್ತು ನಂತರದಲ್ಲಿ ವಿದೇಶ ಪ್ರವಾಸ
ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು.
ಬಳಿಕ ದಕ್ಷಿಣ ಆಫ್ರಿಕಾ ಕೂಡ ಕೆಲ ವರ್ಷಗಳವರೆಗೆ ಉತ್ತಮ ದಾಖಲೆ ಮಾಡಿತ್ತು. ಈ ಎರಡೂ ತಂಡಗಳನ್ನು ಬಿಟ್ಟರೆ ಸದ್ಯ ಕಳೆದ 5-6 ವರ್ಷಗಳಲ್ಲಿ ಯಾವ ತಂಡ ವಿದೇಶ ಪ್ರವಾಸದಲ್ಲಿ ಉತ್ತಮ ಸಾಧನೆ ಮಾಡಿದೆ ಹೇಳಿ? ಹೀಗಿರುವಾಗ ಕೇವಲ ಭಾರತ ತಂಡವನ್ನೇಕೆ ಟೀಕಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಭಾರತ ಪ್ರಸಕ್ತ ಋತುವಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1-2 ಮತ್ತು ಇಂಗ್ಲೆಂಡ್ ವಿರುದ್ಧ 1-4 ಪಂದ್ಯಗಳ ಅಂತರದಿಂದ ಸರಣಿ ಸೋಲನುಭವಿಸಿತ್ತು. ಅದರ ಬೆನ್ನಲ್ಲೇ ಇದೀಗ ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸ
ಕೈಗೊಂಡಿದೆ. ಅಲ್ಲಿ ತಂಡ 3 ಟಿ20, 4 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ. ಭಾರತ, ನ.21ರಂದು ಗಾಬಾದಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.