ಪರ್ತ್ ಟೆಸ್ಟ್: ಕೊಹ್ಲಿ-ರಹಾನೆ ಅರ್ಧಶತಕ, ಆಸಿಸ್‌ಗೆ ಶುರುವಾಯ್ತು ನಡುಕ!

By Web DeskFirst Published Dec 15, 2018, 3:54 PM IST
Highlights

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನ ಮುಕ್ತಾಯವಾಗಿದೆ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ ವಿರಾಟ್ ಕೊಹ್ಲಿ ಸೈನ್ಯ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಇಲ್ಲಿದೆ ದ್ವಿತೀಯ ದಿನದ ಹೈಲೈಟ್ಸ್.

ಪರ್ತ್(ಡಿ.15): ಪರ್ತ್ ಟೆಸ್ಟ್ ಪಂದ್ಯದ ಮೊದಲ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದ್ದರೆ, ದ್ವಿತೀಯ ದಿನ ಟೀಂ ಇಂಡಿಯಾ ಕಮ್‌ಬ್ಯಾಕ್ ಮಾಡಿದೆ. ಆಸಿಸ್ ತಂಡವನ್ನ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ, ಇದೀಗ 154 ರನ್‌ಗಳ ಹಿನ್ನಡೆಯಲ್ಲಿದೆ.

ದ್ವಿತೀಯ ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯಾ ಪ್ಯಾಟ್ ಕಮಿನ್ಸ್ ವಿಕೆಟ್ ಕಳೆದುಕೊಂಡಿತು. ಕಮಿನ್ಸ್ 19 ರನ್ ಸಿಡಿಸಿ ಔಟಾದರು. ಆದರೆ ನಾಯಕ ಟಿಮ್ ಪೈನೆ ಹೋರಾಟ ನಡೆಸಿ 39 ರನ್ ಕಾಣಿಕೆ ನೀಡಿದರು. ಆದರೆ ಮಿಚೆಲ್ ಸ್ಟಾರ್ಕ್, ನಥನ್ ಲಿಯೋನ್ ಹಾಗೂ  ಜೋಶ್ ಹೆಜಲ್‌ವುಡ್ ರನ್‌ಗಳಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಪರ್ತ್ ಟೆಸ್ಟ್: ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ ವೈರಲ್..!

ಆಸ್ಟ್ರೇಲಿಯಾ 326 ರನ್‌ಗೆ ಆಲೌಟ್ ಆಯಿತು.  ಇಶಾಂತ್ ಶರ್ಮಾ 4 ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಾಗೂ ಹನುಮಾ ವಿಹಾರಿ ತಲಾ 2 ವಿಕೆಟ್ ಉರುಳಿಸಿದರು. ಆದರೆ ವೇಗಿ ಮೊಹಮ್ಮದ್ ಶಮಿ ವಿಕೆಟ್ ಇಲ್ಲದೆ ನಿರಾಸೆ ಅನುಭವಿಸಿದರು.

ಆಸಿಸ್ ತಂಡವನ್ನ ಆಲೌಟ್ ಮಾಡಿದ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಕೆಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಎರಡಂಕಿ ತಲುಪಲಿಲ್ಲ.  ಆದರೆ ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು.

ಇದನ್ನೂ ಓದಿ: ಐಪಿಎಲ್ ಹರಾಜು: ಆಟಗಾರರ ಖರೀದಿಗೆ ತಂಡದಲ್ಲಿರುವ ಬಾಕಿ ಹಣವೆಷ್ಟು?

ರಕ್ಷಣಾತ್ಮಕ ಆಟವಾಡಿದ ಪೂಜಾರ 24 ರನ್ ಸಿಡಿಸಿ ಔಟಾದರು. ನಂತ್ರ ಜೊತೆಯಾದ ಅಜಿಂಕ್ಯ ರಹಾನೆ ಹಾಗೂ ಕೊಹ್ಲಿ ಜೊತೆಯಾಟದಿಂದ ಭಾರತ ಕಮ್‌ಬ್ಯಾಕ್ ಮಾಡಿತು. ಕೊಹ್ಲಿ ಹಾಗೂ ರಹಾನೆ ಅರ್ಧಶತಕ ಸಿಡಿಸಿ ಮಿಂಚಿದರು. 

ವಿರಾಟ್ ಕೊಹ್ಲಿ ಅಜೇಯ 82 ರನ್ ಸಿಡಿಸಿದರೆ, ರಹಾನೆ ಅಜೇಯ 51 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 2ನೇ ದಿನದಾಟದ ಅಂತ್ಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿತು. ಈ ಮೂಲಕ 154 ರನ್‌ಗಳ ಹಿನ್ನಡೆಯಲ್ಲಿದೆ.
 

click me!